ಚುನಾವಣೆ ನೀತಿ ಸಂಹಿತೆ ಅಂದರೇನು? ಏನೆಲ್ಲಾ ನಿಯಮಗಳಿರುತ್ತೆ ವಿವರ ನೋಡಿ.

model code of conduct model code of conduct
model code of conduct photo

ಬಹಳಷ್ಟು ಜನರಿಗೆ ಚುನಾವಣೆ ನೀತಿ ಸಂಹಿತೆ ( model code of conduct )ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ.ಹಾಗೆಯೇ ಏನೆಲ್ಲಾ ನಿಯಮಗಳಿರುತ್ತವೆ ಎಂಬ ಗೊಂದಲ ಇದೆ.ಈ ಬಗ್ಗೆ ಅಲ್ಪ ಮಾಹಿತಿ ಓದುಗರಿಗಾಗಿ ನೀಡಲಾಗಿದೆ.

Advertisement


ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಭಾಷಣ, ಚುನಾವಣಾ ಪ್ರಚಾರ, ರ್ಯಾಲಿ, ಮೆರವಣಿಗೆಗಳು, ಚುನಾವಣಾ ಪ್ರಣಾಳಿಕೆಗಳಿಗೆ ಸಂಬಂಧಿಸಿದಂತೆ ವಿಧಿಸುವ ನಿಯಮಗಳನ್ನು ನೀತಿ ಸಂಹಿತೆ ಎನ್ನಲಾಗುತ್ತದೆ.
ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ, ಚುನಾವಣಾ ಆಯೋಗವು ಶಾಂತಿಯುತ ಚುನಾವಣೆಗಳಿಗಾಗಿ ನೀತಿ ಸಂಹಿತೆಯನ್ನು ಅನುಸರಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡುತ್ತದೆ.

ನೀತಿ ಸಂಹಿತೆ ಯಾವಾಗ ಜಾರಿಯಾಯ್ತು?

1960 ರಲ್ಲಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಮೊದಲು ಪರಿಚಯಿಸಲಾಯಿತು. 1962ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ಈ ನಿಯಮಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿತ್ತು. ನೀತಿ ಸಂಹಿತೆ ವ್ಯವಸ್ಥೆಯು 1967ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಂದ ಜಾರಿಗೆ ಬಂದಿತು. ಸಂಹಿತೆ ಜಾರಿಗೆ ಬಂದ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರರು ಚುನಾವಣಾ ಆಯೋಗದ ನೌಕರರಾಗಿ ಕೆಲಸ ಮಾಡಬೇಕೇ ಹೊರತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸರ್ಕಾರದ ನೌಕರರಲ್ಲ. ಚುನಾವಣೆ ಮುಗಿದ ನಂತರ ನೀತಿ ಸಂಹಿತೆ ರದ್ದಾಗುತ್ತದೆ.

ಸಚಿವರು, ಶಾಸಕರಿಗೆ ಏನೇನು ನಿರ್ಬಂಧ?

ಸಚಿವರು ಸರ್ಕಾರಿ ವೆಚ್ಚದಲ್ಲಿ ಚುನಾವಣಾ ರ‍್ಯಾಲಿ ನಡೆಸುವಂತಿಲ್ಲ. ಈ ಅವಧಿಯಲ್ಲಿ ಸಚಿವರು ತಮ್ಮ ನಿವಾಸದಿಂದ ಕಚೇರಿಗೆ ಹೋಗಲು ಮಾತ್ರ ಸರ್ಕಾರಿ ವಾಹನಗಳನ್ನು ಬಳಸಬಹುದು. ಚುನಾವಣಾ ರ‍್ಯಾಲಿಗಳು ಮತ್ತು ಪ್ರವಾಸಗಳಿಗೆ ಅವುಗಳನ್ನು ಬಳಸಬಾರದು.

ನೀತಿ ಸಂಹಿತೆ ನಿಯಮಗಳು ಹೀಗಿವೆ

ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಯಾವುದೇ ಸಂದರ್ಭದಲ್ಲಿ ಸರ್ಕಾರದ ಹಣವನ್ನು ಬಳಸುವಂತಿಲ್ಲ. ಸರ್ಕಾರದ ಘೋಷಣೆಗಳು, ಉದ್ಘಾಟನೆಗಳು, ಶಂಕುಸ್ಥಾಪನೆ ಮುಂತಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಆದರೆ ಕೆಲವು ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ಮುಂದುವರಿಸಬಹುದು.

ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.

ಜಾತಿ, ಧರ್ಮದ ನಿಂದನಾತ್ಮಕ ಭಾಷಣ ಮಾಡುವಂತಿಲ್ಲ. ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ ನಿಷಿದ್ಧ. ಕಾರ್ಯಕ್ರಮ, ಯೋಜನೆಗಳ ಆಧಾರದಲ್ಲಿ ವಾಗ್ದಾಳಿಗೆ ಅವಕಾಶವಿದೆ. ಅದರೆ ವೈಯಕ್ತಿಕ, ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ಭಾಷಣ ಮಾಡುವಂತಿಲ್ಲ.

ನೀತಿ ಸಂಹಿತೆಯ ಅಡಿಯಲ್ಲಿ, ಸರ್ಕಾರವು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಿಲ್ಲ. ವರ್ಗಾವಣೆ ಬಹಳ ಮುಖ್ಯವಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಅಗತ್ಯ.

ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯುವುದು ಅವಶ್ಯಕ. ರಾತ್ರಿ 10.00 ರಿಂದ ಬೆಳಗ್ಗೆ 6.00 ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

ಸಾರ್ವಜನಿಕರು ಹಣ ಕೊಂಡೊಯ್ಯಬಹುದೇ?
ಬಹುತೇಕರಲ್ಲಿ ಗೊಂದಲ ಇರುವುದು ಹಣ ಕೊಂಡೊಯ್ಯುವುದರಲ್ಲಿ. ಹಾಗಾಗಿ ಈ ಬಗ್ಗೆ ಹೇಳಲೇ ಬೇಕು. ನೀವು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಆಥವಾ ಸ್ಥಳೀಯವಾಗಿ 50 ಸಾವಿರಕ್ಕಿಂತ ಹೆಚ್ಚು ಹಣ ಕೊಂಡೊಯ್ದರೇ ಇವುಗಳಿಗೆ ದಾಖಲೆ ಇರಬೇಕಾಗುತ್ತದೆ.ಇಲ್ಲವಾದರೇ ಈ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸು ಚುನಾವಣಾಧಿಕಾರಿಗೆ ಅವಕಾಶವಿದೆ. ಒಂದು ವೇಳೆ ವಸ್ತುಗಳನ್ನು ಸಹ ಕೊಂಡೊಯ್ದರೂ ಅವುಗಳಿಗೆ ಪೂರಕ ದಾಖಲೆ ನೋಡಿ ಸಂಚಾರ ಮಾಡಬಹುದಾಗಿದೆ. ಒಂದುವೇಳೆ ದಾಖಲೆ ಇಲ್ಲದೇ ಕೊಂಡೊಯ್ದರೂ ಪೂರಕ ದಾಖಲೆ ನೋಡಿದಲ್ಲಿ ಈ ಹಣವನ್ನು ಮರಳಿಸುವ ಇಲ್ಲವೇ ನ್ಯಾಯಾಲಕ್ಕೆ ಒಪ್ಪಿಸುವ ಹಕ್ಕು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾತ್ರ ಇರುತ್ತದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement