Kumta karave protest uttrakannada

ಶಿರಸಿ -ಕುಮಟಾ ರಾಜ್ಯಹೆದ್ದಾರಿಯಲ್ಲಿ ಗುಂಡಿತುಂಬ ಮೀನು! ಹೆದ್ದಾರಿಯಲ್ಲಿ ಅರಳಿದ ಬಾಳೆ ಗಿಡ ವೀಕ್ಷಿಸಿದ ಕುಮಟ AC

93

KUMTA NEWS: ಹೊಂಡ ತುಂಬಿದ ಹೆದ್ದಾರಿ, ವರ್ಷಗಳ ಮೇಲೆ ವರ್ಷ ಉರುಳಿದರೂ ಆಮೆ ನಡೆಯಲ್ಲಿರುವ ಶಿರಸಿ (SIRSI)-ಕುಮಟಾ (KUMTA)ರಾಜ್ಯ ಹೆದ್ದಾರಿಯ ಸ್ಥಿತಿಗೆ ಇಂದು ಕರವೇ ಸ್ವಾಭಿಮಾನಿ ಬಣದಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಹೌದು ಕುಮಟಾದಿಂದ ಶಿರಸಿಯ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ನಾಗರಿಕರು ಮೀನು ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಅಕ್ರೋಶ ಹೊರ ಹಾಕಿದ್ದಾರೆ.

ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯರಯ ಕುಮಟಾದ ಅಳಕೋಡದಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆಗಿಳಿದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ರಸ್ತೆಯ ಗುಂಡಿಗಳಲ್ಲಿ ಮೀನು ಬಿಟ್ಟು ಹಿಡಿಯುವ ಮೂಲಕ ಗಮನ ಸೆಳೆದರು.

ಗುಂಡಿ ಇರುವ ಕಡೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದರು.

ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು, ವಾಹನ ಸವಾರರಿಗೆ ಸಾಕಷ್ಟು ಕಿರಿಯನ್ನುಂಟು ಮಾಡುತ್ತಿದೆಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹೋರಾಟ ಮುಂದುವರಿಸುವ ಹಟ ಹಿಡಿದರು.

ಬಳಿಕ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೂರು ದಿನದೊಳಗೆ ರಸ್ತೆ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿದರು. ತಾತ್ಕಾಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!