ಶಿರೂರು ಭೂ ಕುಸಿತ|ಈ ತಪ್ಪಿಗೆ IRB -NHAI ಹೊಣೆ ಇಲ್ಲಿದೆ ದಾಖಲೆ

Uttara Kannada National Highway NH 66 landslide Uttara Kannada National Highway NH 66 landslide
IRB National Highways Authority responsible for highway land subsidence

Landslide News :- ಅಂಕೋಲದ ಶಿರೂರು ಭೂ ಕುಸಿತವಾಗಿ 11ಜನ ಮೃತಪಟ್ಟ ಬೆನ್ನಲ್ಲೇ ಇದೀಗ ಗುಡ್ಡ ಕುಸಿಯಲು ಹೆದ್ದಾರಿ ಕಾಮಗಾರಿ ಕೈಗೊಂಡ ಐ.ಆರ್.ಬಿ ಕಂಪನಿಯೇ ನೇರ ಹೊಣೆ ಎಂಬುದಕ್ಕೆ ಹಲವು ದಾಖಲೆಗಳು ಹೊರಬರುತ್ತಿದೆ.ಜೊತೆಗೆ ಹಸಿರು ಪೀಠ ಸಹ ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿವರಣೆ ಕೇಳಿದೆ.

ಈ ಬಗ್ಗೆ ಕನ್ನಡವಾಣಿಗೆ ಒಂದಿಷ್ಟು ದಾಖಲೆ ದೊರೆತಿದ್ದು ಇದರ ವಿವರ ಇಲ್ಲಿದೆ.

Advertisement

ಕಾಮಗಾರಿ ಪ್ರಾರಂಭದಿಂದ ಹೆದ್ದಾರಿಯಲ್ಲಿ ನಿರಂತರ ಭೂ ಕುಸಿತ , ಮತ್ತೊಂದೆಡೆ 11 ಸಾವುಗಳು. ಇನ್ನೂ ಮೂರು ಜನರಿಗಾಗಿ ನಿರಂತರವಾಗಿ ನಡೆಯುತ್ತಿರುವ ಶೋಧ ಕಾರ್ಯ. ಹೌದು ಯಾರೋ ಮಾಡಿದ ತಪ್ಪಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗೆ 11 ವರ್ಷದಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿವೆ.

ಹೀಗಿದ್ದರೂ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಕಂಪನಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ ಎನ್ನುತ್ತಲೇ ಸಾಗಿದ್ದು ಇದೀಗ 2017 ರ ಕುಮಟಾದ ತಂಡ್ರಕುಳಿ ಭೂ ಕುಸಿತವಾಗಿ ಮೂರು ಸಾವಿನ ಬಳಿಕ ಶಿರೂರಿನಲ್ಲಿ 11 ಸಾವಾಗಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ IRB ಕಂಪನಿಗೆ ಈ ಭಾಗದಲ್ಲಿ ಭೂ ಕುಸಿವಾಗುವ ಮಾಹಿತಿ ಇದ್ದರೂ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಭೂಮಿ ಪಡೆದರೂ ಅಗತ್ಯ ಕ್ರಮ ಕೈಗೊಳ್ಳದೇ ನಿರ್ಲಕ್ಷ ತೋರಿರುವ ಬಗ್ಗೆ ದಾಖಲೆಗಳು ಕನ್ನಡವಾಣಿಗೆ ದೊರೆತಿದೆ.

ದಾಖಲೆ ಹೀಗಿದೆ ನೋಡಿ:-

ಈ ದಾಖಲೆ ಪ್ರಕಾರ ಅಂಕೋಲಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಗುಡ್ಡ ಕುಸಿಯಲಿದೆ ಎಂದು 2020ರಲ್ಲೇ ಅರಣ್ಯ ಜಾಗಕ್ಕೆ NHAI ಬೇಡಿಕೆ ಇಟ್ಟಿದ್ದು ಇದರಂತೆ ಅರಣ್ಯ ಇಲಾಖೆಯಿಂದ 28.218 ಹೆಕ್ಟೇರ್ ಜಾಗ ಹಾಗೂ ಖಾಸಗಿಯಿಂದ 3.411ಹೆಕ್ಟೇರ್ NHAIಗೆ ಪೂರೈಕೆಯೂ ಸಹ ಮಾಡಲಾಗಿತ್ತು.

2017 ರಲ್ಲಿ ತಂಡ್ರಕುಳಿ ಭೂ ಕುಸಿತವಾದ ನಂತರ ಬೆಂಗಳೂರಿನ ಐಐಎಸ್‌ಸಿ (IISC) ಪ್ರೊ. ಟಿ.ಜಿ.ಸೀತಾರಾಮ್ ಸ್ಥಳಕ್ಕೆ ಭೇಟಿ ನೀಡಿ ಭವಿಷ್ಯದಲ್ಲಿ ಗುಡ್ಡ ಕುಸಿತವಾಗದಂತೆ ತಡೆಯಲು ಉದ್ದ ಹಾಗೂ ಅಡ್ಡಲಾಗಿ ಸ್ಟೆಪ್ ಮಾದರಿಯಲ್ಲಿ ತುಂಡರಿಸಲು ಸೂಚಿಸಿದ್ದರು.

ತಂಡ್ರಕುಳಿ ಘಟನೆಯಿಂದ ಎಚ್ಚೆತ್ತ ಅಂದಿನ ಜಿಲ್ಲಾಧಿಕಾರಿ ಹೆದ್ದಾರಿ ಪ್ರಾಧಿಕಾರ ದೊಂದಿಗೆ ತಜ್ಞರು ನೀಡಿದ್ದ ಮಾಹಿತಿಯಂತೆ ಕೆಲವು ನಿಯಮಗಳನ್ನು ಸೇರಿಸಿ ಒಪ್ಪಂದ ಮಾಡಿಕೊಂಡಿತ್ತು.

ಆದರೇ ಇದೀಗ ಈ ದಾಖಲೆ ಜಿಲ್ಲಾಡಳಿತದ ಬಳಿಯೂ ಮಾಯವಾಗಿದ್ದು ಇದರ ದಾಖಲೆ ನೀಡುವಂತೆ ಜಿಲ್ಲಾಡಳಿತ NHAI ಗೆ ಸೂಚಿಸಿದೆ. ಹೀಗಿದ್ದರೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ NHAI ಹಾಗೂ IRB ಕಂಪನಿ ಸುರಕ್ಷತೆಯ ಒಪ್ಪಂದ ಪತ್ರ ಸಹ ನೀಡದೇ ವಂಚಿಸುತ್ತಿದೆ.

ಇನ್ನು ಐ.ಆರ್.ಬಿ ಕಂಪನಿ ಹಾಗೂ NHAI ನಿರ್ಲಕ್ಷ ಕುರಿತು ಅಂಕೋಲ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಲಾಗಿದೆ.ಜೊತೆಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೂ ಭೂ ಕುಸಿತಕ್ಕೆ ಕಾರಣ ಎಂದು ವರದಿ ನೀಡಿರುವುದನ್ನು ಆಧರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಸಚಿವಾಲಯ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಷ್ಟ್ರೀಯ ಹಸಿರು ಪೀಠ ವಿವರಣೆ ಕೇಳಿದೆ.

ಸದ್ಯ ಹಲವು ದಾಖಲೆಗಳಿಂದ ಅವೈಜ್ಞಾನಿಕ ಕಾಮಗಾರಿ ಹಾಗೂ ಸೂಕ್ತ ಅಧ್ಯಯನ ನಡೆಸದೇ ಕಾಮಗಾರಿ ನಡೆಸಿದ್ದು ,ಪರಿಸರ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠ ಅಭಿಪ್ರಾಯ ಪಟ್ಟಿದ್ದು ಈ ಪ್ರಕರಣದ ವಿಚಾರಣೆಯನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ IRB ಕಂಪನಿ ನಿರ್ಲಕ್ಷ ಹಲವು ಜೀವಗಳು ಬಲಿಯಾಗುವಂತೆ ಮಾಡಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement