ಬಿಜೆಪಿ ಹಣದ ಕಥೆ ಬಿಚ್ಚಿಟ್ಟ ಶಿವರಾಮ್ ಹೆಬ್ಬಾರ್!

ರಾಜ್ಯಸಭಾ ಚುನಾವಣೆಯಲ್ಲಿ ( Rajyasabha election ) ಕರ್ನಾಟಕದಲ್ಲಿ ಕಾಂಗ್ರೆಸ್ ನಮಗೆ ಹಣ ನೀಡಿದ್ದಾರೆ ಎಂಬುದಾದರೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ (Bjp)
Shivaram hebbar Shivaram hebbar
advertisement contact

ಕಾರವಾರ ,ಮಾರ್ಚ,03 :-ರಾಜ್ಯಸಭಾ ಚುನಾವಣೆಯಲ್ಲಿ ( Rajyasabha election ) ಕರ್ನಾಟಕದಲ್ಲಿ ಕಾಂಗ್ರೆಸ್ ನಮಗೆ ಹಣ ನೀಡಿದ್ದಾರೆ ಎಂಬುದಾದರೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ (Bjp) ಕಾಂಗ್ರೆಸ್ (congress )ನವರಿಗೆ ಎಷ್ಟು ಹಣ ನೀಡಿದೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮಾಜಿ ಸಚಿವ ಈಶ್ವರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಹಣ ಪಡೆದಿರುವ ಆರೋಪ ಮಾಡಿರುವ ಈಶ್ವರಪ್ಪನವರ ಮಾತಿಗೆ ತಿರುಗೇಟು ನೀಡಿದರು‌. ಬೇರೆ ರಾಜ್ಯದಲ್ಲಿ ಬಿಜೆಪಿ ಎಷ್ಟೆಷ್ಟು ‘ಇನ್ವೆಸ್ಟಮೆಂಟ್’ (investment )ಮಾಡಿದೆ ಎಂಬುದನ್ನೂ ಹೇಳಬೇಕು ಎಂದರು.

Advertisement

ಮಾಜಿ ಸಚಿವ ಈಶ್ವರಪ್ಪನವರ( farmer Minister Ishwarappa )ಮಾತನ್ನು ರಾಜ್ಯ ಬಿಜೆಪಿಯೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡುವ ಸ್ಥಿತಿ ಬಂದಿತು ಎಂಬುದು ನಾಡಿನ ಜನಕ್ಕೆ ಹಾಗೂ ಸ್ವತಃ ಈಶ್ವರಪ್ಪನವರಿಗೂ ತಿಳಿದಿದೆ. ಅಲ್ಲದೇ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು ? ಎಂಬುದನ್ನು ಹೇಳಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಈಶ್ವರಪ್ಪನವರು ಗಾಜಿನ ಮನೆಯಲ್ಲಿ ಕುಳಿತುಕೊಂಡು ಇನ್ನೊಂದು ಗಾಜಿಗೆ ಕಲ್ಲು ಹೊಡೆಯುವಾಗ ಎಚ್ಚರಿಕೆಯಿಂದ ಇರಬೇಕು ಎಂದರು. ಇದೇ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧೆಯ ಬಗ್ಗೆ ‘ ಇದು ಕೇವಲ ಮಾಧ್ಯಮ ಸೃಷ್ಟಿ ‘ ಎಂದು ಪ್ರತಿಕ್ರಿಯಿಸಿದರು.‌

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement