BREAKING News: ನಂಬರ್‌ ಒನ್‌ ನ್ಯೂಸ್‌ ಚಾನಲ್ ಆಗಿ ಹೊರ ಹೊಮ್ಮಿದ public tv 

Breaking news :-Public TV BARC TRP ಪಟ್ಟಿಯಲ್ಲಿ ನಂ.1 ಕನ್ನಡ ಸುದ್ದಿವಾಹಿನಿಯಾಗಿ ಹೊರಹೊಮ್ಮಿದೆ. TV9 ಮತ್ತು News18 ಕನ್ನಡವನ್ನು ಹಿಂದಿಕ್ಕಿ ಹೊಸ ಮಾರ್ಕೆಟ್ ಲೀಡರ್ ಆಗಿದೆ.
Public TV Kannada news channel logo with Ranganna anchor celebrating No.1 position in BARC TRP rating February 2026 Public TV Kannada news channel logo with Ranganna anchor celebrating No.1 position in BARC TRP rating February 2026
Public TV Kannada news channel logo with Ranganna anchor celebrating No.1 position in BARC TRP rating February 2026

BREAKING News: ನಂಬರ್‌ ಒನ್‌ ನ್ಯೂಸ್‌ ಚಾನಲ್ ಆಗಿ ಹೊರ ಹೊಮ್ಮಿದ public tv.

 

ಬೆಂಗಳೂರು(19 February2026):- ಬಾರ್ಕ್ ಸಂಸ್ಥೆಯಿಂದ ಪ್ರತಿ ಗುರುವಾರ ಬಿಡುಗಡೆಯಾಗುವ ನ್ಯೂಸ್ ಚಾನೆಲ್ಗಳ TRP  ಪಟ್ಟಿಯಲ್ಲಿ ಪಬ್ಲಿಕ್ ಟಿವಿ (public tv) ಕನ್ನಡ ನಂ.1 ಕನ್ನಡ ಸುದ್ದಿವಾಹಿನಿಯಾಗಿ ಹೊರಹೊಮ್ಮಿದೆ.  ಇದರೊಂದಿಗೆ ಟಿವಿ9 ಹಾಗೂ ನ್ಯೂಸ್ 18 ಕನ್ನಡ ಚಾನಲ್ ನನ್ನು ಹಿಂದಿಕ್ಕಿದೆ. ಈ ಜಾಗದಲ್ಲೀಗ ಪಬ್ಲಿಕ್ ಟಿವಿ ಕನ್ನಡ ಹೊಸದಾಗಿ ತಲೆ ಎತ್ತಿರುವ ಮಾರ್ಕೆಟ್ ಲೀಡರ್ ಆಗಿದೆ.

Gokarna| ಮಹಾಬಲೇಶ್ವರನ ದರ್ಶನ ಪಡೆದ ಭಕ್ತ ಹೃದಯಾಘಾತದಲ್ಲಿ ಸಾವು

Advertisement

ಕಳೆದ ಒಂದೂವರೆ ವರ್ಷದಿಂದ ಗ್ರಾಮೀಣ ಕರ್ನಾಟಕ ಕೇಂದ್ರಿತ ಸುದ್ದಿಗಳತ್ತಲೇ ನಿರಂತರ ವರದಿಗಾರಿಕೆ ಮಾಡಿದ್ದ ನ್ಯೂಸ್18 ನಂ.1 ಆಗುವ ಪ್ರಯತ್ನದಲ್ಲಿ ಯಶ ಕಂಡಿತ್ತು. Tv9 ಹಿಂದೆ ಬಿದ್ದರೂ ತನ್ನ ಸ್ಥಾನವನ್ನ ಮತ್ತೆ ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಆದರೇ ಇದೀಗ ಕರ್ನಾಟಕದ  ವೀಕ್ಷಕರು ಪಬ್ಲಿಕ್ ಟಿವಿ ಯನ್ನ ಕೈ ಹಿಡಿದಿದ್ದು ,ಇತ್ತೀಚೆಗಷ್ಟೇ ತನ್ನ 14 ನೇ ವಸಂತದ ಸಂಭ್ರಮಾಚರಣೆ ಮಾಡಿದ್ದ ಪಬ್ಲಿಕ್ ಟಿವಿ ಇದೀಗ ಮೊದಲಬಾರಿ ರಾಜ್ಯದಲ್ಲೇ ನಂಬರ್ ಒನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏನಿದು ಬಾರ್ಕ್ ರೇಟಿಂಗ್?

ಬಾರ್ಕ್, ಸುದ್ದಿವಾಹಿನಿಗಳ ಟಿಆರ್ಪಿ ಅಂಕಿ-ಅಂಶ ಬಿಡುಗಡೆ ಮಾಡುವ ಅಧಿಕೃತ ರೇಟಿಂಗ್ ಸಂಸ್ಥೆಯಾಗಿದ್ದು ಪ್ರತಿ ಗುರುವಾರ ದೇಶದ ಎಲ್ಲಾ ವಾಹಿನಿಗಳ ರೇಟಿಂಗ್ ಕೊಡುತ್ತದೆ. ಅದರಂತೆ ಇಂದು ಬಂದ ರೇಟಿಂಗ್ನಲ್ಲಿ ಕನ್ನಡ ನ್ಯೂಸ್ ಚಾನೆಲ್ಗಳ ಪೈಕಿ ಪಬ್ಲಿಕ್ ಟಿವಿ ನಂ.1 ಆಗಿದೆ.

ಸುಮಾರು ನಾಲ್ಕು ವಿಭಾಗಗಳ ಮೂಲಕ ಬಾರ್ಕ್ ಸಂಸ್ಥೆ ಚಾನೆಲ್ಗಳ ರೇಟಿಂಗ್ ಲೆಕ್ಕ ಹಾಕುತ್ತದೆ. ಕರ್ನಾಟಕ ರೂರಲ್, ಕರ್ನಾಟಕ ಅರ್ಬನ್, ಕರ್ನಾಟಕ ಬಿಲೋ 10 ಲ್ಯಾಕ್ ಮತ್ತು ಬೆಂಗಳೂರು ಅನ್ನೋದು ಈ ನಾಲ್ಕು ವಿಭಾಗಗಳು. ಈ ನಾಲ್ಕು ವಿಭಾಗಗಳಲ್ಲೂ ಯಾವ ಸುದ್ದಿವಾಹಿನಿ ಎಷ್ಟು ಮಾರ್ಕೆಟ್ ಶೇರ್ ಪಡೆದಿದೆ ಅನ್ನೋದರ ಸರಾಸರಿ ಅಂಕಿಅಂಶಗಳೊಂದಿಗೆ ಯಾವ ವಾಹಿನಿ ಯಾವ ಸ್ಥಾನದಲ್ಲಿದೆ ಎಂದು ನಿರ್ಧರಿಸಲಾಗುತ್ತದೆ.

 ಯಾವ ವಾಹಿನಿಗೆ ಎಷ್ಟು ರೇಟ್ ಇಲ್ಲಿದೆ ವಿವರ

TRP rating Kannada news channel
TRP ರೇಟಿಂಗ್

ಈಡೇರಿದ ರಂಗಣ್ಣನ ಕನಸು

Public TV Rangnath
ಪಬ್ಲಿಕ್ ಟಿವಿ ಎಂ.ಡಿ . ರಂಗನಾಥ್

14 ವರ್ಷದ ಹಿಂದೆ ಚಿಕ್ಕ ಬಂಡವಾಳದಲ್ಲಿ ಪ್ರಾರಂಭವಾದ ಪಬ್ಲಿಕ್ ಟಿವಿ ಮೊದಲು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನ ಬಳಸಿಕೊಂಡು ಕಾರ್ಯಾರಂಭ ಮಾಡಿತು. ಪತ್ರಕರ್ತರಿಗೆ ನೀಡಿವ ಲ್ಯಾಬ್ ಟಾಪ್ ,ಕ್ಯಾಮರ ,ಮೈಕ್ ಗಳು ಸಹ ಸೆಕಡ್ ಹ್ಯಾಂಡ್ ಆಗಿತ್ತು.

Latest news |ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸರಣಿ ಅಪಘಾತ |ವಿದೇಶಿ ಪ್ರಜೆಗಳು ಸೇರಿ 24 ಜನರಿಗೆ ಗಾಯ

ವರದಿಗಾರರಿಗೆ ಕೊಡುವ ಸಂಬಳ ಬೇರೆ ಚಾನಲ್ ಗೆ ಹೋಲಿಸಿದರೇ ಈ ಸಂಸ್ಥೆಯಲ್ಲಿ ಅತೀ ಕನಿಷ್ಟ ಮಟ್ಟದ ಸಂಬಳ ನೀಡುತಿತ್ತು. ಆದರೂ ಯಾವ ಪತ್ರಕರ್ತನೂ ಬೇಸರಿಸಿಕೊಳ್ಳದೇ ಬೇರೆ ಚಾನಲ್ ಗೆ ಹಾರದೇ ರಂಗಣ್ಣನನ್ನು ತಂದೆ ಎಂದು ಭಾವಿಸಿ ಕೆಲಸ ನಿರ್ವಹಿಸಿದರು.

Honnavar| ಬ್ರಾಹ್ಮಣರು ಮು***ಮಕ್ಕಳು ಎಂದ ಸಿಗಂಧೂರು ಧರ್ಮದರ್ಶಿ ರಾಮಪ್ಪ ವಿಡಿಯೋ ವೈರಲ್ 

ಇದರ ಪ್ರತಿಫಲವಾಗಿ ರಾಜ್ಯದಲ್ಲೇ ಎರಡನೆ ಸ್ಥಾನಕ್ಕೇರಿದ ಪಬ್ಲಿಕ್ ಟಿವಿಯನ್ನ ಬೀಟ್ ಮಾಡಲಾಗಲಿಲ್ಲ. ಇನ್ನು ಅಲ್ಪ ಬಂಡವಾಳದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದ ಪಬ್ಲಿಕ್ ಟಿವಿಯನ್ನ ಶತಗಥಾಯ ಕೆಳಗಿಳಿಸಲು ಟಿವಿ 9 ದೈತ್ಯ ಹಲವು ಸಾಹಸ ಮಾಡಿತು. ತಮ್ಮ ಮಾಧ್ಯಮದಲ್ಲೇ ರಂಗಣ್ಣನ ನ್ನ ವ್ಯಂಗ್ಯ ಮಾಡಿ ಸುದ್ದಿ ಬಿತ್ತರಿಸಿತು. ಆದರೇ ವೀಕ್ಷಕ ಪ್ರಭುಗಳು ರಂಗಣ್ಣನ ಬಿಗ್ ಬುಲಟಿನ್ ಅನ್ನ ಮಿಸ್ ಮಾಡಲಿಲ್ಲ.

ರಂಗಣ್ಣನ ಶ್ರಮ ಪಬ್ಲಿಕ್ ಟಿವಿ ತಂಡ ಹಲವು ಏರಿಳಿತ ಕಂಡರೂ ಕುಗ್ಗದೇ ಮುಂದುವರೆದರು. ಇದರ ಪ್ರತಿಫಲ ಒಂದು ಚಿಕ್ಕ ಸಂಸ್ಥೆ  ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿತು.

ಅಲ್ಪ ಸಂಬಳದಲ್ಲಿ ಇದ್ದ ಇಲ್ಲಿನ ವರದಿಗಾರರು ಹಾಗೂ ತಾಂತ್ರಿಕ ವಿಭಾಗದವರು ಇದೀಗ ರಾಜ್ಯದಲ್ಲೇ ಅತೀ ಹೆಚ್ಚು ಕನ್ನಡ ಮಾಧ್ಯಮದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು.

ರಾಜ್ಯದಲ್ಲೇ ಟಿವಿ ಮಾಧ್ಯಮ ಇತಿಹಾಸದಲ್ಲಿ ತನ್ನ ಉದ್ಯೋಗಿಗಳನ್ನ ಮಕ್ಕಳಂತೆ ನೋಡುವ ಹಾಗೂ ಅವರ ಕಷ್ಟಕ್ಕೆ ಹೆಗಲು ಕೊಡುವ ಏಕೈಕ ಸಂಸ್ಥೆ ಎಂದರೆ ಅದು ಪಬ್ಲಿಕ್ ಟಿವಿ. ಸಾಮಾಜಿಕ ಕಾರ್ಯದ ಜೊತೆ ಸಂಸ್ಥೆಯ ಉದ್ಯೋಗಿಗಳನ್ನು ಸಹ ಪ್ರೀತಿಯಿಂದ ಬೆಳೆಸುತ್ತಿದೆ. ಯಾವ ಮಾಧ್ಯಮವೂ ಕೋವಿಡ್ ಸಮಯದಲ್ಲಿ ಉದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸಲಿಲ್ಲ .ಆದರೇ ಪಬ್ಲಿಕ್ ಟಿವಿ ಸಂಬಳದ ಜೊತೆ ಅವರಿಗೆ ಬೇಕಾದ ಸಾಮಗ್ರಿ , ಹಣದ ಸಹಾಯ ಮಾಡಿತು.ಸಂಬಳದ ಜೊತೆ ಹೆಚ್ಚುವರಿ ಹಣ ನೀಡಿದ್ದಲ್ಲದೇ ಸಂಸ್ಥೆ ಕಷ್ಟದಲ್ಲಿ ಇದ್ದರೂ ನಿಗದಿ ದಿನಾಂಕದಲ್ಲಿ ಸಂಬಳ ನೀಡಿತು, ಕೋವಿಡ್ ಸಮಯದಲ್ಲಿ ಹಲವು ಮಾಧ್ಯಮ ಸಂಸ್ಥೆಗಳು ಸಂಬಳಕ್ಕೆ ಕತ್ತರಿ ಹಾಕಿದ್ದವು.ಇನ್ನು ಕೆಲವು ಸಂಸ್ಥೆಗಳು ಸಂಬಳವನ್ನೇ ನೀಡಿರಲಿಲ್ಲ. ಹೀಗಿರುವಾಗ ಇಂತಹ ಕಷ್ಟದ ಸಂದರ್ಭದಲ್ಲೂ ಸಂಬಳ ಹೆಚ್ಚು ಮಾಡಿತು. ತನ್ನ ಉದ್ಯೋಗಿಗಳನ್ನ ವಿದೇಶಿ ಪ್ರವಾಸಕ್ಕೆ ಕಳುಹಿಸಿತು. ಹೀಗೆ ಹಲವು ವಿಷಯದಲ್ಲಿ ಪಬ್ಲಿಕ್ ಟಿವಿ ಮಾದರಿಯಾಗಿ ನಡೆದುಕೊಂಡಿತು.

ಸದಾ ರಂಗಣ್ಣನನ್ನು  ಅಣಕಿಸುತಿದ್ದ ಕೆಲವು ಮಾಧ್ಯಮಗಳಿಗೆ ರಂಗಣ್ಣ 14 ವರ್ಷದ ವಸಂತದಲ್ಲಿ  ಕರ್ನಾಟಕಕ್ಕೆ ನಂಬರ್ 1 ಆಗುವ ಮೂಲಕ ಉತ್ತರ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement