Sirsi:ಬೇಟೆ ಹುಡುಕಿ ಹೋದ ಚಿರುತೆಗೆ ವಿದ್ಯುತ್ ಸ್ಪರ್ಶ:ಸ್ಥಳದಲ್ಲೇ ಚಿರತೆ ,ಕಾಡುಬೆಕ್ಕು ಸಾವು.

258

ಕಾರವಾರ :- ಮೂರು ವರ್ಷ ಪ್ರಾಯದ ಚಿರುತೆಯೊಂದು (cheetha )ಕಾಡು ಬೆಕ್ಕನ್ನು ಹಿಡಿಯಲು ಹೋಗಿ ವಿದ್ಯುತ್ ಕಂಬ ಏರಿದ ( electric shock )ಪರಿಣಾಮ ಚಿರುತೆ (Panther) ಹಾಗೂ ಕಾಡು ಬೆಕ್ಕು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಳ್ಳಿ ಬಳಿಯ ಹುಡ್ಲಮನೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಇದನ್ನೂ ಓದಿ:-ಕುಮಟಾ: ಬ್ರೂಣ ಹತ್ಯೆ ,ಶಿಶು ಮಾರಾಟ ಜಾಲದಲ್ಲಿ ಜಾನು ಆಸ್ಪತ್ರೆ! ಏನಿದು ಆರೋಪ?

ನೀರ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ ಚಿರತೆ ಓಡಾಟ ನಡೆಸುತಿದ್ದು ತನ್ನ ಬೇಟೆ ಅರಸಿ ಹೋದ ಸಂದರ್ಭದಲ್ಲಿ ಕಾಡುಬೆಕ್ಕೊಂದು ಕಂಡಿದ್ದು ಇದನ್ನು ಹಿಡಿಯಲು ಹೋದಾಗ ಕಾಡು ಬೆಕ್ಕು ವಿದ್ಯುತ್ ಕಂಬ ಏರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ವಿದ್ಯುತ್ ಸ್ಪರ್ಶ ಕ್ಕೆ ಕಾಡು ಬೆಕ್ಕು ಅಲ್ಲಿಯೇ ಅಸುನೀಗಿದ್ದು, ಇದನ್ನು ಹಿಡಿಯಲು ಬಂದ ಚಿರತೆ ಸಹ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೋಡಿದ್ದು ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ:-ಉತ್ತರ ಕನ್ನಡ ಜಿಲ್ಲೆಯ ಕೊನೆ ಗೌಡರಿಗೆ ಉಚಿತ 10 ಲಕ್ಷ ವಿಮೆ!

ಇನ್ನು ಅಪರೂಪಕ್ಕೆ ಕಾಣಸಿಗುವ ಚಿರತೆ,ಕಾಡುಬೆಕ್ಕುಗಳು ವಿದ್ಯುತ್ ಅವಘಡದಿಂದ ಸಾವು ಸಂಭವಿಸುತಿದ್ದು ಈ ಬಗ್ಗೆ ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!