Uttara kannada|ಒಂದೇ ವರ್ಷದಲ್ಲಿ 704 ಕಡೆ ಆನೆ ದಾಳಿಯಿಂದ ಬೆಳೆ ಹಾನಿ| 23ಲಕ್ಷ ಹಣ ಪರಿಹಾರ ಬಾಕಿ .
Uttara kannada news( 29 december 2025):-ಉತ್ತರ ಕನ್ನಡ (uttara kannada)ಜಿಲ್ಲೆಯ ಹಳಿಯಾಳ,ಜೋಯಿಡಾ ಭಾಗದಲ್ಲಿ ಆನೆಗಳು ಮತ್ತು ಮಾನವನ ಸಂಘರ್ಷ ಹೆಚ್ಚಾಗಿದ್ದು ಲಕ್ಷಾಂತರ ರುಪಾಯಿ ಬೆಳೆ ನಾಶ ವಾದರೇ,ಹಲವರಿಗೆ ಬೆಳೆನಾಶದ ಪರಿಹಾರ ಸಗದೇ ರೈತರು ಪರದಾಡುವಂತಾಗಿದೆ.
Dandeli|ಗಂಧದ ತುಂಡು ಸಾಗಾಟ |ವಾಹನ ವಶ
ಹಾಗಿದ್ರೆ ಒಂದು ವರ್ಷದಲ್ಲಿ ಆದ ನಷ್ಟವೆಷ್ಟು? ಪರಿಹಾರ ಸಿಕ್ಕಿದ್ದೆಷ್ಟು ,ವನ್ಯಜೀವಿಗಳ ದಾಳಿ ತಡೆಯಲು ಅರಣ್ಯ ಇಲಾಖೆ ಕೈಗೊಂಡ ಕ್ರಮ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪಶ್ಚಿಮಘಟ್ಟವನ್ನು ತನ್ನೊಳಗೆ ಅಡಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬರುವ ಜೋಯಿಡಾ,ದಾಂಡೇಲಿ,ಹಳಿಯಾಳ ಭಾಗಗಳು ಆನೆಗಳ ಉಪಟಳಗಳು ಕಳೆದ ಎಂಟು ವರ್ಷಕ್ಕೆ ಹೋಲಿಸಿದರೇ ಒಂದು ವರ್ಷದಲ್ಲಿ ಹೆಚ್ಚಾಗಿದೆ.
Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು
ಜಿಲ್ಲೆಯ ಜೋಯಿಡಾ ,ಹಳಿಯಾಳ ಭಾಗದ್ದು. ಕಳೆದ ಒಂದು ವಾರದಿಂದ ಜೋಯಿಡಾ ಹಾಗೂ ಹಳಿಯಾಳ ಭಾಗದಲ್ಲಿ ಆನೆಗಳು ಕಾಡಿನಿಂದ ನಾಡಿನತ್ತ ಗುಳೆ ಇಡುತ್ತಿವೆ. ಜೋಡಿಡಾದ ಪೊಟೋಲಿ ನಗರಿ ಗ್ರಾಮ ಸೇರಿದಂತೆ ಹಲವು ಕಡೆ ಆನೆಗಳು ಭತ್ತ ,ಅಡಿಕೆ ಬೆಳೆ ನಾಶ ಮಾಡಿದರೇ ಹಳಿಯಾಳ ಭಾಗದಲ್ಲಿ ಕಟಾವಿಗೆ ಬಂದ ಕಬ್ಬುಗಳುಆನೆಪಾಲಾಗುತ್ತಿದೆ.

ಹಳಿಯಾಳ,ಸಾಂಭ್ರಾಣಿ,ಭಾಗವತಿ,ದಾಂಡೇಲಿ,ಪರ್ನೋಲಿ,ಜೋಯಿಡಾ,ಜಗಲಪೇಟ,ತಿನೈಘಾಟ್ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿವೆ. ಒಂದು ವರ್ಷದಲ್ಲಿ ಈ ಭಾಗದ ಒಟ್ಟು 704 ರೈತರ ತೋಟಗಳು ಆನೆಗಳ ಪಾಲಾಗಿವೆ. ಇನ್ನು ಬೆಳೆದ ಬೆಳೆ ಕೈಗೆ ಬರುವಾಗಲೇ ಆನೆಗಳ ಪಾಲಾಗುತಿದ್ದು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ .ಇನ್ನು ಅರಣ್ಯ ಇಲಾಖೆ ಈವರೆಗೆ 5673941 ಲಕ್ಷ ರೂ ರೈತರಿಗೆ ಬೆಳೆನಾಶದ ಪರಿಹಾರ ನೀಡಿದೆ ಆದರೇ 293 ರೈತರ 2302631 ಲಕ್ಷಗಳು ಪರಿಹಾರದ ಹಣ ಈವರೆಗೂ ಬಂದಿಲ್ಲ. ಇನ್ನು ಸಾಕುಪ್ರಾಣಿಗಳು ವನ್ಯಜೀವಿಗಳ ದಾಳಿಗೆ ಹಳಿಯಾಳ ಜೋಯಿಡಾ ಭಾಗದಲ್ಲಿ ಒಟ್ಟು 198 ಸಾವಾಗಿದೆ.

ಇದರಲ್ಲಿ ಭಾಗವತಿ ಭಾಗದಲ್ಲಿ 55 ಸಾಕುಪ್ರಾಣಿಗಳ ಸಾವು ಹೆಚ್ಚು ದಾಖಲಾಗಿದೆ.ಇವುಗಳಿಗೆ ಅರಣ್ಯ ಇಲಾಖೆ ನಿಗದಿ ಮಾಡಿದ ಮೊತ್ತ 4008190 ಲಕ್ಷ ವಾದರೇ ,ಪರಿಹಾರ ನೀಡಿದ್ದು 10,20000ಲಕ್ಷಗಳು ಮಾತ್ರ . ಉಳಿದ 2988190 ಲಕ್ಷ ಹಣ ಬಾಕಿ ಉಳಿದಿದೆ.
ಇನ್ನು ಎಷ್ಟೇ ಆನೆಗಳನ್ನು ಓಡಿಸಿದ್ರೂ ರಾತ್ರಿ ,ಹಗಲು ಎನ್ನದೇ ರೈತರ ತೋಟಕ್ಕೆ ಗುಳೆ ಇಡುತ್ತಿವೆ .ಹೀಗಾಗಿ ಪರಿಹಾರ ತಕ್ಷಣ ನೀಡಬೇಕು ಎಂಬುದು ರೈತರ ಆಗ್ರಹ.
ಗಿಡ ನೆಡಿ ,ಡಿವೈಸ್ ಬಳಸಿ

ಇನ್ನು ಕಾಡುಪ್ರಾಣಿಗಳ ಅದರಲ್ಲೂ ಆನೆಗಳ ಉಪಟಳ ತಪ್ಪಿಸಲು ಕೃಷಿ ಭೂಮಿಯ ಸುತ್ತಲೂ ನಿಂಬೆಗಿಡ ನಡೆಬೇಕು ಹಾಗೂ ಪ್ರಾಣಿ ಓಡಿಸುವ ದ್ವನಿ ಬರುವ ಡಿವೈಸ್ ಬಳಸಲು ಕಾಳಿ ಹುಲಿ ರಕ್ಷಿತಾರಣ್ಯದ ಆರ್.ಎಫ್.ಓ ಎಮ್.ಎಸ್ ಹರಳೀಮಠ್ ರವರು ಸಲಹೆ ನೀಡಿದ್ದಾರೆ.
Haliyala:ಕುಡಿದು ಜಗಳ ಠಾಣೆಗೆ ಕರೆದೊಯ್ದು ಕೈ ಮುರಿದ ಹಳಿಯಾಳ ಪೊಲೀಸರು !
ಕಳೆದ ಐದಾರು ವರ್ಷಕ್ಕೆ ಹೋಲಿಸಿದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತಿದೆ. ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ 40 ಕ್ಕೂ ಹೆಚ್ಚು ಆನೆಗಳು ಆಶ್ರಯ ಪಡೆದಿವೆ. ಇನ್ನು ಭದ್ರಾ ಅಭ್ಯಯಾರಣ್ಯದಿಂದಲೂ ಅಹಾರ ಅರಸಿ ಆನೆಗಳ ಹಿಂಡುಸಿದ್ದಾಪುರ,ಬನವಾಸಿ,ಶಿರಸಿ,ಮುಂಡಗೋಡು,ಯಲ್ಲಾಪುರ ಮೂಲಕ ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಗುಳೆ ಇಡುತ್ತಿವೆ. ಕಾಡಿನ ಆಹಾರಕ್ಕೆ ಸೀಮಿತವಾಗಿದ್ದ ಈ ಆನೆಗಳು ಇದೀಗ ಕಬ್ಬು,ಭತ್ತ,ಅಡಕೆ ಬೆಳೆಯ ರುಚಿ ನೋಡಿವೆ.
ನೀರು ಆಹಾರ ಸುಲಭವಾಗಿ ನಾಡಿನಲ್ಲಿ ಸಿಗುತಿದ್ದು ಇದರಿಂದ ಆನೆಗಳು ಇತ್ತೀಚೆಗೆ ಹೆಚ್ಚು ಜನರಿರುವ ಪ್ರದೇಶಕ್ಕೆ ಗುಳೆ ಇಡುತ್ತಿವೆ. ಇನ್ನು ಹೀಗೆ ಗುಳೆ ಬಂದ ಆನೆಗಳು ಮಾನವನ ಕೆಟ್ಟ ತನಕ್ಕೆ ಬಲಿಯಾಗುತ್ತಿವೆ.

ಇತ್ತೀಚೆಗೆ ಬೆಳಗಾವಿ ಗಡಿಯಲ್ಲಿ ಭತ್ತದ ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿ ತಗಲಿ ಆನೆ ಬಲಿಯಾದರೇ , ಕುಳಗಿಯಲ್ಲಿ ಆನೆ ಬಿಡಾರದ ಆನೆಯೇ ವಿದ್ಯುತ್ ಶಾಕ್ ನಿಂದ ಸಾವು ಕಂಡಿತ್ತು. ಇನ್ನು ಇದೇ ಬಿಡಾರದ ಮರಿಯಾನೆ ಸಹ ಸ್ಥಳೀಯ ಆಹಾರ ಸೇವಿಸಿ ಉದರ ಸಮಸ್ಯೆಯಿಂದ ಮೃತಪಟ್ಟಿದೆ. ಇನ್ನು ಕೇವಲ ಆನೆಗಳಲ್ಲದೇ ಇತರ ಪ್ರಾಣಿಗಳೂ ನಾಡಿನತ್ತ ಬರುತ್ತಿವೆ.

ಈವರೆಗೆ ವನ್ಯಜೀವಿಗಳಿಂದ ಒಂದು ವರ್ಷದಲ್ಲಿ 198 ಸಾಕು ಪ್ರಾಣಿಗಳ ಸಾವಾಗಿದೆ. 49 ಸಾಕುಪ್ರಾಣಿಗಳ ಸಾವಿನ ಪರಿಹಾರ ಈವರೆಗೂ ಬಂದಿಲ್ಲ,ಇನ್ನು ಇತರೆ ಭಾಗದ ರಕ್ಷಿತಾರಣ್ಯಕ್ಕೆ ಹೋಲಿಸಿದರೆ ಮಾನವನ ಹತ್ಯೆ ಶೂನ್ಯವಿದೆ. ಒಂದು ವರ್ಷದಲ್ಲಿ ಓರ್ವ ವ್ಯಕ್ತಿ ಮಾತ್ರ ವನ್ಯಜೀವಿ ದಾಳಿಗೆ ಗಾಯಗೊಂಡಿದ್ದು ಆತನಿಗೆ ಅರಿಹಾರ ನೀಡಲಾಗಿದೆ.ಇನ್ನು ಆನೆಗಳ ಜೊತೆ ಕರಡಿ,ಹುಲಿ ದಾಳಿಯಾಗುತಿದ್ದು ಅರಣ್ಯ ಇಲಾಖೆ ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಆನೆಗಳ ಮೇಲುಸ್ತುವಾರಿ.
ಆನೆಗಳು ಯಾವ ಭಾಗದಲ್ಲಿ ಸಂಚರಿಸುತ್ತವೆ ,ಎಲ್ಲಿರುತ್ತವೆ ಎಂದು ನೋಡಲು ಆನೆ ಮೇಲುಸ್ತುವಾರಿ ತಂಡವಿದ್ದು ಈ ತಂಡ ಯಾವಾಗ ಎಲ್ಲಿ ಆನೆಗಳು ಬರುತ್ತವೆ,ಹೋಗುತ್ತವೆ ಎಂಬುದನ್ನ ಮೇಲುಸ್ತುವಾರಿ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತದೆ. ಸಧ್ಯ ಈಗಿರುವ ಮಾಹಿತಿ ಪ್ರಕಾರ ಕಾಳಿ ಅಭಯಾರಣ್ಯ ವ್ಯಾಪ್ತಿಗೆ ಭದ್ರಾ ಅಭಯಾರಣ್ಯ ಭಾಗದಿಂದ ಆನೆಗಳ ಹಿಂಡು ಸೊರಬ ಮೂಲಕ ಬನವಾಸಿ ಮಾರ್ಗವಾಗಿ ಯಲ್ಲಾಪುರ,ದಾಂಡೇಲಿಯತ್ತ ಸಾಗುತಿದ್ದು ಈ ಹಿಂಡು ಕಾಳಿ ಅಭಯಾರಣ್ಯ ಸೇರಲಿವೆ.
Dandeli : ಕುಟುಂಬಸ್ತರಿಂದಲೇ ಸರಪಳಿಯಲ್ಲಿ ಬಂದಿಯಾದ ಮಾನಸಿಕ ಅಸ್ವಸ್ತನ ರಕ್ಷಣೆ
ಒಟ್ಟಿನಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಸಂಖ್ಯೆ ವೃದ್ಧಿಯಾಗುವ ಜೊತೆ ಗುಳೆಬರುವ ಆನೆಗಳ ಹಿಂಡು ಸಹ ಹೆಚ್ಚಾಗಿದೆ.ಅರಣ್ಯ ಇಲಾಖೆ ಇವುಗಳ ಮಾನೀಟರಿಂಗ್ ಮಾಡುತಿದ್ದಾರೆ.ಆದರೇ ಆಹಾರ ಅರಸಿ ನಾಡಿನತ್ತ ಬರುವ ಆನೆಗಳು ತೋಟ ,ಗದ್ದೆಯನ್ನ ನಾಶ ಮಾಡಿದ್ರೆ , ರೈತ ಬೆಳದ ಬೆಳೆ ನಾಶವಾಗುತ್ತಿದ್ದು ಪರಿಹಾರವೇ ದೊಡ್ಡ ಸಮಸ್ಯೆಯಾಗಿದೆ.
