ಕಾರವಾರ:-ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಶೇಕಡ 100% ನಷ್ಟು ನೇಮಕಾತಿಯನ್ನು ಎಪ್ರಿಲ್ ತಿಂಗಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ರವರು ತಿಳಿಸಿದರು.ಇಂದು ಕಾರವಾರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾತನಾಡಿದ ಅವರು
ರಾಜ್ಯದಲ್ಲಿ ಕಾಲಿ ಇರುವ ಇಲಾಖೆಯ ಎಲ್ಲಾ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಶಸಸ್ತ್ರ ಮೀಸಲು ಪಡೆಯ ಕಾಲಿ ಹುದ್ದೆಗೆ ಆರು ತಿಂಗಳಲ್ಲಿ ಬರ್ತಿ ಗೊಳಿಸಲಾಗುತ್ತದೆ ಎಂದರು. ಪೊಲೀಸ್ ಇಲಾಖೆಗೆ ಕರಾವಳಿ ಭಾಗದಲ್ಲಿ ಭರ್ತಿಯಾಗುವವರ ಸಂಖ್ಯೆ ಕಡಿಮೆ ಇದೆ.ಹೀಗಾಗಿ ಮೀನುಗಾರರ ಮಕ್ಕಳಿಗೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಇನ್ನು ಇಲಾಖೆಯಲ್ಲಿ ಎ.ಎಸ್.ಐ,ಹೆಡ್ ಕಾನ್ ಸ್ಟೇಬಲ್ ಗಳು ಅರ್ಹತೆ ಹೊಂದಿರುವ ಐದುವರ್ಷ ಪೂರೈಸಿರುವ ಎಲ್ಲರಿಗೂ ಭಟ್ತಿ ನೀಡಲಾಗುತ್ತಿದೆ,ಅರ್ಹತೆ ಇರುವ ಯಾವುದೇ ಸಿಬ್ಬಂದಿಗಳನ್ನು ಬಿಟ್ಟಿಲ್ಲ ಎಂದರು.ಇನ್ನು ಕೆ.ಎಸ್.ಐ.ಎಫ್ (ಕರ್ನಾಟಕ ಕೈಗಾರಿಕಾ ಭದ್ರತಾಪಡೆ) ಬ್ಯಟಾಲಿಯನ್ ಅನ್ನು ಕಾರವಾರದಲ್ಲಿ ಪ್ರಾರಂಭಿಸಲು ತಂಡ ರಚನೆ ಮಾಡಲಾಗಿದ್ದು ಶೀಘ್ರ ಪ್ರಾರಂಭವಾಗಲಿದೆ,ಹಂತಹಂತವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗುವುದು ಎಂದರು.
ಭಟ್ಕಳದಲ್ಲಿ ಪಾಕಿಸ್ತಾನದ ಮಹಿಳೆಯರು ಇಲ್ಲಿನ ಪುರುಷರನ್ನು ವಿವಾಹವಾಗಿ ಇಲ್ಲಿನ ಪೌರತ್ವ ಸಮಸ್ಯೆ ಅನುಭವಿಸುತ್ತಿದ್ದಾರೆ.ಈ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡಲಾಗುತ್ತದೆ. ವಿದೇಶದಿಂದ ಪ್ರವಾಸಕ್ಕೆ ಬಂದ ವಿದೇಶಿಗರು ವಿಸಾ ಅವಧಿ ಮುಗಿದರೂ ಇಲ್ಲಿಯೇ ತಂಗುತಿದ್ದಾರೆ,ಇದು ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇಂತವರನ್ನು ನೇರವಾಗಿ ಡಿಟಂಕ್ಷನ್ ಸೆಂಟರ್ ಗೆ ಕಳುಗಿಸಲಾಗುತ್ತಿದೆ,ನಂತರ ಆ ದೇಶದ ಯಂಬಸಿ ಗಳಿಗೆ ಮಾಹಿತಿ ನೀಡಿ ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ,ಹೆಚ್ಚಿನ ಪ್ರಕರಣ ದಾಖಲಿಸಲಾಗುತ್ತಿದೆ,ಇದರ ಜೊತೆಗೆ ಸೈಬರ್ ಕ್ರೈ ಕೂಡ ಹೆಚ್ಚಾಗಿದೆ.ಸೈಬರ್ ಕ್ರೈಮ್ ನಿಯಂತ್ರಣ ರಹಿತ ಅಪರಾಧವಾಗಿದೆ.ಇದನ್ನು ಪತ್ತೆಹಚ್ಚಲು ಕಷ್ಟಸಾಧ್ಯ ಹೀಗಾಗಿ ಇದರ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದೆ.ಹೀಗಾಗಿ ನಾವು ಅಂತಹ ಜಾಗವನ್ನು ಗುರುತಿಸಿ ಪಿ.ಡಬ್ಲು.ಡಿ ಗೆ ಮಾಹಿತಿ ನೀಡಿದ್ದೇವೆ ಎಂದರು.