Train updates|6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು-ಕಾರವಾರ ಕರಾವಳಿ ರೈಲು ಸೇವೆ ಪುನಾರಂಭ.

Train updates news:-After six months, the Bengaluru–Mangaluru–Karwar Gomateshwara Express train service has resumed, boosting coastal travel and tourism.
special train for Konkan railway route special train for Konkan railway route

Train updates: 6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು-ಕಾರವಾರ ಕರಾವಳಿ ರೈಲು ಸೇವೆ ಪುನಾರಂಭ.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.

Train Updates news :- ಬೆಂಗಳೂರು-ಕರಾವಳಿ ರೈಲು ಸಂಪರ್ಕ ಉತ್ತಮ ಗೊಳಿಸಲು ಕಾರ್ಯ ಸಾಗುತಿದ್ದು ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆ ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ.

ಕರಾವಳಿಗೆ ಸಂಚಾರ ಮಾಡುವ ವಿವಿಧ ರೈಲುಗಳಲ್ಲಿ ಒಂದಾದ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) ಸೇವೆ ಮತ್ತೆ ಪ್ರಾರಂಭವಾಗಿದೆ.

Train news: ನದಿಯ ಸೇತುವೆ ಮೇಲೆ ನಿಂತ ಇಂಟರ್ ಸಿಟಿ ರೈಲು ! ಆಗಿದ್ದೇನು?

Advertisement

ಮೊದಲಿನಂತೆ ಬೆಂಗಳೂರಿನ ಯಶವಂತಪುರದಿಂದ ಈ ರೈಲು  (train) ಸಂಚಾರ ಸೇವೆ ಆರಂಭಿಸಲಿದೆ. ವಾರದಲ್ಲಿ ಮೂರು ದಿನ ಸೇವೆ ಪಡೆಯಬಹುದಾಗಿದೆ. ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸೇವೆಯನ್ನು ನವೆಂಬರ್‌ವರೆಗೆ ಆರು ತಿಂಗಳ ಕಾಲ ರದ್ದುಗೊಳಿಸಲಾಗಿತ್ತು.

ಇದೀಗ ಮತ್ತೆ ಸೇವೆ ಪುನಾರಂಭಿಸುವ ಮೂಲಕ ನೈಋತ್ಯ ರೈಲ್ವೆ ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

https://chat.whatsapp.com/HbI3YG8zHwtAYxenaKEbAg?mode=ems_copy_ta

ಉತ್ತರ ಕನ್ನಡ,ಉಡುಪಿ,ಮಂಗಳೂರು ಪ್ರವಾಸೋದ್ಯಮಕ್ಕೆ ಉತ್ತೇಜಿಸುವ ಉದ್ದೇಶದಿಂದ ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಈ ಗೊಮ್ಮಟೇಶ್ವರ ರೈಲಿಗೂ ವಿಸ್ಟಾಡೋಮ್ ಕೋಚ್ ಅಳವಡಿಸಿದೆ.

Karwar|ಸರ್ಕಾರ ಖಜಾನೆ ಖಾಲಿ ಅಂತೆ! ಕಾರವಾರದಲ್ಲಿ PWD ಹೆಸರಲ್ಲಿ ಭಿಕ್ಷೆ ಬೇಡಿದ ಆಟೋ ಚಾಲಕರು

ಬೋಗಿಗಳಲ್ಲಿ ಅಗಲ ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣೆ, ವ್ಯವಸ್ಥಿತ ಆಸನಗಳಲಿದ್ದವು. ಇದರಿಂದ ಹಾಸನ, ಸಂಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಮಂಗಳೂರು ಮಾರ್ಗದುದ್ದಕ್ಕೂ ಕಾಣುವ ಪ್ರಕೃತಿಯನ್ನು ಸವಿಯಬಹುದಾಗಿತ್ತು. ಪ್ರವಾಸಿಗರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಆದರೆ ಈ ರೈಲಿನ ರದ್ದತಿಯಿಂದ ಪ್ರಯಾಣಿಕರಿಗೆ ಒಂದಷ್ಟು ನಿರಾಸೆಯಾಗಿತ್ತು.

Train| ಮಾರ್ಗ, ನಿಲುಗಡೆ ನಿಲ್ದಾಣಗಳು

ಯವಂತಪುರದಿಂದ ಈ ರೈಲು ವಾರದಲ್ಲಿ ರವಿವಾರ, ಮಂಗಳವಾರ ಮತ್ತು ಗುರುವಾರ ಹೀಗೆ ಮೂರು ದಿನ ಪ್ರಯಾಣ ಮಾಡುತ್ತದೆ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟವಾಳ ಮೂಲಕ ಮಂಗಳೂರಿಗೆ ಹೋಗುತ್ತದೆ. ರೈಲು ಶ್ರವಣಬೆಳಗೊಳ (ಗೊಮ್ಮಟೇಶ್ವರನಿಗೆ), ಹಾಸನ ಮತ್ತು ಸಕಲೇಶಪುರದಲ್ಲಿ ಹೆಚ್ಚು ಕಾಲ ನಿಲ್ಲುತ್ತದೆ. ಈ ರೈಲನ್ನು ಮುಂದಿನ ಕೆಲವು ನಿಲ್ದಾಣಗಳವರೆಗೆ ವಿಸ್ತರಣೆಗೆ ಕರಾವಳಿ ಜನರು ಆಗ್ರಹಿಸಿದ್ದಾರೆ.

ರೈಲು ಟಿಕೆಟ್ ಬುಕ್ಕಿಂಗ್ ಆರಂಭ.

 train for Konkan railway route
After six months, the Bengaluru–Mangaluru–Karwar Gomateshwara Express train service has resumed, boosting coastal travel and tourism.

 ರೈಲು ಸೇವೆ ಪುನಾರಂಭಗೊಳ್ಳುತ್ತಿದ್ದಂತೆ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಲಿದೆ.

ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.indianrail.gov.in ಭೇಟಿ ನೀಡಬೇಕು. ರೈಲಿನ ಸೇವೆ ಬಗ್ಗೆ ಮಾಹಿತಿ, ಟಿಕೆಟ್, ಮಾರ್ಗ ಇತರ ಮಾಹಿತಿಗಾಗಿ ಸಹಾಯವಾಣಿ 139ಕ್ಕೆ ಕರೆ ಮಾಡುವಂತೆ ಕೋರಲಾಗಿದೆ.

ಇದನ್ನೂ ಓದಿ:-Uttara kannada|ದಾಂಡೇಲಿಗೆ ಮತ್ತೆ ಹಳಿ ಏರಿದ ಪ್ರಯಾಣಿಕರ ರೈಲು|ಹೊಸ ಡೆಮು ವೇಳಾಪಟ್ಟಿ ಪ್ರಕಟ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement