Jagadish Shettar ಮರಳಿ ಬಿಜೆಪಿ ಗೆ- ಶೆಟ್ಟರ್ ಹೇಳಿದ್ದೇನು?

136

ನವದೆಹಲಿ,ಜನವರಿ25:- ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (jagadeesh shatter )ಬಿಜೆಪಿಗೆ ಮರಳಿದ್ದಾರೆ.

ಈ ಕುರಿತು ಮಾತನಾಡಿದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಪಕ್ಷಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಗೆ ಸೇರಿದ್ದೆ. ಕಳೆದ ಎಂಟು ತಿಂಗಳಿಂದ ಪಕ್ಷಕ್ಕೆ ಮರಳಿ ಬರುವಂತೆ ರಾಜ್ಯದ ,ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಅಪೇಕ್ಷೆಯಿತ್ತು. ರಾಷ್ಟ್ರೀಯ ನಾಯಕರು ಸಹ ಪಕ್ಷಕ್ಕೆ ಮರಳಿ ಬರುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ:-Ankola| Instagram ಪೋಸ್ಟ್ ನಲ್ಲಿ ಹಿಂದುಗಳ ಅವಹೇಳನ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು!

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಇಂದು ಬೆಳಗ್ಗೆ ಬೇಟಿಯಾಗಿದ್ದೆನು.ತುಂಬಾ ಪ್ರೀತಿಯಿಂದ ಬರಮಾಡಿಕೊಂಡರು.ಇವತ್ತು ಸಹ ರಾಷ್ಟ್ರೀಯ ನಾಯಕರಾದ ನಡ್ಡಾ ರವರನ್ನು ಭೇಟಿಯಾಗಬೇಕಿದೆ.

ಇದನ್ನೂ ಓದಿ:-ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲುಮಾರ್ಗ ಸರ್ವೆ ಪೂರ್ಣ |ಮುಂದೇನು? ವಿವರ ನೋಡಿ.

ನಾನು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡುತಿದ್ದೇನೆ ,ಈ ಹಿನ್ನಲೆಯಲ್ಲಿ ವಿಧಾನಪರಿಷತ್ ಸ್ಪೀಕರ್ ಆದ ಬಸವರಾಜ್ ಹೊರಟ್ಟಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಈ ಮೇಲ್ ಮೂಲಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಅಂಗೀಕರಿಸುವಂತೆ ಕೇಳಿಕೊಂಡಿದ್ದೇನೆ.

ಇದನ್ನೂ ಓದಿ:-ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

ಇನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ಈಮೇಲ್ ಮೂಲಕ ರಾಜಿನಾಮೆ ಸಲ್ಲಿಸಿದ್ದೇನೆ ಕುದ್ದಾಗಿ ರಾಜೀನಾಮೆ ಪತ್ರ ವನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ( Congress President DK Sukumar) ರವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಇನ್ನು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು,ಅದಕ್ಕಾಗಿ ಶ್ರಮವಹಿಸಬೇಕಿದೆ,ಈ ಕಾರಣದಿಂದ ನಾನು ಮರಳಿ ಪಕ್ಷಕ್ಕೆ ಬಂದ್ದೇನೆ,ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!