News karnataka a power tv cameraman who used to be a house of death for a while Mysore road

ದರ್ಶನ್ ದರ್ಶನ ಮಾಡಿಸಲು ಹೋದ ಪವರ್ ಟಿವಿ ಕ್ಯಾಮರಾ ಮನ್ JUST ಮಿಸ್ !

139

BANGALORE MEDIA NEWS :- ನಟ ದರ್ಶನ್ (actor Darshan) ಕೊಲೆ ಆರೋಪದಲ್ಲಿ ಬಂಧಿತರಾಗುತಿದ್ದಂತೆ ಟಿ.ವಿ ಮಾಧ್ಯಮಗಳಲ್ಲಿ ದರ್ಶನ್ ನ ಇಂಚಿಂಚು ಮಾಹಿತಿ ಹೆಕ್ಕು ವರದಿಗಾರು,ಕ್ಯಾಮರಾ ಮನ್ ಗಳು ಸುದ್ದಿ ಮಾಡುತಿದ್ದಾರೆ.

ಬಹುತೇಕ ಎಲ್ಲಾ ಟಿವಿಗಳಲ್ಲಿ ಕಿರಾತಕನ ಸುದ್ದಿಯೇ ! ಜನರು ಸಹ ಟಿವಿಯಲ್ಲಿ ನೋಡಿ ಮಜ ತೆಗೆದುಕೊಳ್ಳುತಿದ್ದಾರೆ. ಆದ್ರೆ ಈ ಸುದ್ದಿಗಾಗಿ ,ಕ್ಯಾಮರಾಮನ್ ,ರಿಪೋಟರ್ ಗಳ ಪರಿಶ್ರಮ ಮಾತ್ರ ದೇವರಿಗೆ ಪ್ರೀತಿ.

ಇದನ್ನೂ ಓದಿ:-ಕರಾವಳಿಯಲ್ಲಿ ಭಾರಿ ಮಳೆ ಭೂ ಕುಸಿತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಹೌದು ಟಿ.ವಿ ಮಾಧ್ಯಮದಲ್ಲಿ ಕಾರ್ಮಿಕರಿಗಿಂತ ಕನಿಷ್ಟ ವೇತನ ತೆಗೆದುಕೊಳ್ಳುವ ಕ್ಯಾಮರಾಮನ್ /ವರದಿಗಾರರುಗಳು ಹಲವು ಸುದ್ದಿಗಳಿಗೆ ಜೀವವನ್ನೇ ಒತ್ತೆ ಇಡುತ್ತಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಇಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಿಂದ ಮೈಸೂರ್ ರೋಡ್ ಮೂಲಕ ಕೋರ್ಟ್ ಗೆ ದರ್ಶನ್ ಗ್ಯಾಂಗ್ ಕರೆದೊಯ್ಯುವಾಗ ಲೈವ್ ಕಿಟ್ ಬೆನ್ನಿಗಿಟ್ಟು ವಾಹನದ ಹಿಂದೆ ಓಡಿದ ಪವರ್ ಟಿವಿ ಕ್ಯಾಮರಾ ಮನ್ ನವಾಜ್ ರವರು ಎದುರಿಗಿದ್ದ ಲಾರಿಗೆ ಡಿಕ್ಕಿ ಹೊಡೆದು ,ಪೊಲೀಸ್ ವಾಹನದ ಟೈರ್ ನಡಿ ಬಿದ್ದಿದ್ದಾರೆ.

ಅದೃಷ್ಟವಶಾತ್ ಪವರ್ ಟಿವಿ (power TV) ಕ್ಯಾಮರಾ ಮನ್ ಸ್ವಲ್ಪದರಲ್ಲೇ ವಾಹನದ ಟೈರ್ ನಡಿ ಯಾಗುವುದು ತಪ್ಪಿದ್ದು ಜೀವ ಉಳಿದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!