Uttara kannada| ವರ್ಷಾಚರಣೆ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯ ಈ ತಾಣಕ್ಕೆ ನಿರ್ಬಂಧ.
Uttarakannada(30december2025):- ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹೇರಲಾಗಿದೆ.
ಆದರೆ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಪಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ನಿರ್ಬಂಧ ಹೇರದಿದ್ದರೂ ದಾಂಡೇಲಿ ಭಾಗದ ಸಿಂಥೇರಿ ರಾಕ್ಸ್ ಪ್ರವಾಸಿ ತಾಣಕ್ಕೆ ಭದ್ರತೆ ದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ.
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಮಹಾಪೂರ ಹರಿದು ಬರುತ್ತಿದೆ.

ಜಿಲ್ಲೆಯ ಕಡಲತೀರಗಳು, ಧಾರ್ಮಿಕ ಹಾಗೂ ಅರಣ್ಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಕಡಲತೀರಗಳಲ್ಲಿ ಮೋಜು–ಮಸ್ತಿ, ಸಮುದ್ರದಲ್ಲಿ ಇಳಿದು ಸಂಭ್ರಮಿಸುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ.
ಪ್ರವಾಸಿ ತಾಣಗಳಲ್ಲಿ ಭಾರಿ ಜನಸಂದಣಿ.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡಿದ್ದಾರೆ. ದಾಂಡೇಲಿ, ಜೋಯಿಡಾ, ಗೋಕರ್ಣ, ಮುರುಡೇಶ್ವರ, ಹೊನ್ನಾವರ ಮತ್ತು ಕಾರವಾರ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ಜಿಲ್ಲೆಯ ಬಹುತೇಕ ಹೋಟೆಲ್, ರೆಸಾರ್ಟ್ ಮತ್ತು ಹೋಮ್‌ಸ್ಟೇಗಳು ಜನವರಿ ಮೊದಲ ವಾರದವರೆಗೆ ಫುಲ್ ಬುಕ್ ಆಗಿದ್ದು, ಹತ್ತು ಲಕ್ಷಕ್ಕೂ ಅಧಿಕ ಪ್ರವಾಸಿಗರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ರೂಮ್‌ಗಳು ಸಿಗದೇ ಪ್ರವಾಸಿಗರು ಪರದಾಡುತ್ತಿರುವ ದೃಶ್ಯವೂ ಕಂಡು ಬರುತ್ತಿದ್ದು, ಕೆಲವೆಡೆ ದುಪ್ಪಟ್ಟು ದರ ವಸೂಲಿಯಾಗುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.
Gokarna| ಗೋಕರ್ಣದ ವಿಘ್ನ ನಿವಾರಕನಿಂದ ಡಿಕೆ ಗೆ ಸಿಕ್ತು ಬಲಭಾಗದಲ್ಲಿ ಪ್ರಸಾದ|ವಿಡಿಯೋ ನೋಡಿ
ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಕ್ರಮ.
ಮುರುಡೇಶ್ವರ ಮತ್ತು ಗೋಕರ್ಣದಲ್ಲಿ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಿರುವ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಲೈಫ್‌ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ವಸತಿ ನಿಲಯಗಳಲ್ಲಿ ದುಪ್ಪಟ್ಟು ದರ ವಿಧಿಸಬಾರದೆಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಮಂಗಳಗೌರಿ ಮನವಿ ಮಾಡಿದ್ದಾರೆ.
ಭದ್ರತೆಗಾಗಿ ಪೊಲೀಸ್ ಇಲಾಖೆಯ ಕಟ್ಟೆಚ್ಚರ.

ದಾಂಡೇಲಿಯ ಸಿಂಥೇರಿ ರಾಕ್ಸ್ ಪ್ರವಾಸಿ ತಾಣವನ್ನು ಭದ್ರತಾ ಕಾರಣಗಳಿಂದ ತಾತ್ಕಾಲಿಕವಾಗಿ ಅರಣ್ಯ ಇಲಾಖೆ ಬಂದ್ ಮಾಡಿದೆ. ಹೀಗಾಗಿ ಪ್ರವಾಸಿಗರು ಸ್ಥಳಕ್ಕೆ ಬಂದು ಮರಳಿ ತೆರಳುವಂತಾಗಿದೆ.
ಹೊಸವರ್ಷದ ಸಂಭ್ರಮದ ವೇಳೆ ಮದ್ಯದ ಪಾರ್ಟಿಗಳು ನಡೆಯುವ ಸಾಧ್ಯತೆ ಇರುವುದರಿಂದ ಕರಾವಳಿ ಸಮುದ್ರ ತೀರ ಮತ್ತು ನದಿ ಪಾತ್ರದ ಪ್ರದೇಶಗಳಲ್ಲಿ ರಾತ್ರಿ ನಿಷೇಧ ಹೇರಲಾಗಿದೆ.ಜಿಲ್ಲೆಯ ಗಡಿ ಹಾಗೂ ಗೋವಾ ಗಡಿ ಸೇರಿ ಒಟ್ಟು 25 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಹೊಸವರ್ಷಕ್ಕೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು.
ಹೊಸವರ್ಷದ ಸಂಭ್ರಮದ ಹಿನ್ನೆಲೆ ಗೋವಾ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಯಾವುದೇ ಅವಘಡ ಸಂಭವಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದೆ.
Uttara kannada|ಒಂದೇ ವರ್ಷದಲ್ಲಿ 704 ಕಡೆ ಆನೆ ದಾಳಿಯಿಂದ ಬೆಳೆ ಹಾನಿ| 23ಲಕ್ಷ ಹಣ ಪರಿಹಾರ ಬಾಕಿ
ಗೋವಾ ಗಡಿಯಲ್ಲಿ ಬಿಗಿ ಭದ್ರತೆ ಹಾಗೂ ವಾಹನ ತಪಾಸಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ 1300 ಪೊಲೀಸರು ಮತ್ತು 200ಕ್ಕೂ ಹೆಚ್ಚು ಹೋಮ್ ಗಾರ್ಡ್‌ಗಳ ನಿಯೋಜನೆ ಮಾಡಲಾಗಿದೆ.
ರಾತ್ರಿ ಸಮಯದಲ್ಲಿ ಸಮುದ್ರ ಹಾಗೂ ನದಿ ತೀರ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
