ಉತ್ತರ ಕನ್ನಡ ದಲ್ಲಿ ವರ್ಕ ಫ್ರಮ್ ಹೋಮ್ ಉದ್ಯೋಗ- ಎಚ್ಚರ ತಪ್ಪಿದ್ರೆ ನಿಮ್ಮ ಜೋಬಿಗೆ ಬೀಳುತ್ತೆ ಕತ್ತರಿ ಎಚ್ಚರ

ಉತ್ತರ ಕನ್ನಡದಲ್ಲಿ ವರ್ಕ್ ಫ್ರಮ್ ಹೋಮ್ ಉದ್ಯೋಗದ ಹೆಸರಿನಲ್ಲಿ ಹಣ ವಂಚನೆಯ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಾಂದರ್ಭಿಕ ಚಿತ್ರ ಉತ್ತರ ಕನ್ನಡದಲ್ಲಿ ವರ್ಕ್ ಫ್ರಮ್ ಹೋಮ್ ಉದ್ಯೋಗದ ಹೆಸರಿನಲ್ಲಿ ಹಣ ವಂಚನೆಯ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಾಂದರ್ಭಿಕ ಚಿತ್ರ
ಉತ್ತರ ಕನ್ನಡದಲ್ಲಿ ವರ್ಕ್ ಫ್ರಮ್ ಹೋಮ್ ಉದ್ಯೋಗದ ಹೆಸರಿನಲ್ಲಿ ಹಣ ವಂಚನೆಯ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಾಂದರ್ಭಿಕ ಚಿತ್ರ

ಉತ್ತರ ಕನ್ನಡ/ಕಾರವಾರ :- ಕೋವಿಡ್ ನಂತರದಲ್ಲಿ ಹಲವು ಜನರು ತಮ್ಮ ಉದ್ಯೋಗ ವಂಚಿತರಾದರು. ಕೆಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ( work from home) ಮಾಡಲು ಅವಕಾಶ ಮಾಡಿಕೊಟ್ಟಿತು. ಇದರಿಂದ ಹಲವು ಸಂಸ್ಥೆಗಳು ಉತ್ತಮ ಲಾಭವನ್ನು ಪಡೆಯುತಿದ್ದು ಇದೀಗ ವರ್ಕ ಫ್ರಮ್ ಹೋಮ್ ಉದ್ಯೋಗ ಉದ್ಯೋಗ ಕೊಟ್ಟವರಿಗೆ ,ಉದ್ಯೋಗ ಪಡೆದವರಿಗೂ ಲಾಭದಾಯಕ ಎನಿಸಿದೆ. ಇದನ್ನೂ ಓದಿ:-Karwar: ಗಣೇಶೋತ್ಸವದ ಹೆಸರಿನಲ್ಲಿ ಲಾಟರಿ ದಂಧೆ-ಗೋವಾ ಮೂಲದ ವ್ಯಕ್ತಿ ಪೊಲೀಸ್ ವಶಕ್ಕೆ!

ಆದರೇ ಇದೀಗ ಈ ವರ್ಕ ಫ್ರಮ್ ಹೋಮ್ ಎಂಬ ಹೆಸರಿನಲ್ಲಿ ವಂಚಕರು ಉದ್ಯೋಗದ ಆಸೆ ತೋರಿಸಿ ಹಣ ವಂಚಿಸುತಿದ್ದಾರೆ. ಹೀಗಾಗಿ ಉದ್ಯೋಗದ ಆಸೆಯಲ್ಲಿ ಇರುವ ಉದ್ಯೋಗಾಕಾಂಕ್ಷಿಗಳು ಹಿಂದುಮುಂದೆ ನೋಡದೇ ಜಾಹಿರಾತುಗಳನ್ನ ನಂಬಿ ಕೊನೆಗೆ ಹಣದ ಜೊತೆ ಶ್ರಮವನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆಎತ್ತಿದೆ ವರ್ಕ ಫ್ರಮ್ ಹೋಮ್ ಕಚೇರಿ -ನಂಬಿದ್ರೆ ಉಂಡೆನಾಮ ಫಿಕ್ಸ್ .

ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವವರಿಗೆ ಇಲ್ಲಿದೆ ಅವಕಾಶ ,ನಿಮ್ಮ ಬಳಿ ಲ್ಯಾಬ್ ಟಾಪ್ ಇಲ್ಲದಿದ್ರೂ ತೊಂದರೆ ಇಲ್ಲ ,ಮೊಬೈಲ್ ಇದ್ರೂ ಸಾಕು ನೀವು ಮನೆಯಲ್ಲೇ ಇದ್ದು ಲಕ್ಷ ಲಕ್ಷ ಹಣ ಸಂಪಾದಿಸಬಹುದು. ಕೆಲಸವೂ ತುಂಬಾ ಈಸಿ. ಕಾಲೇಜು ಹುಡುಗಿಯರು,ಗೃಹಿಣಿಯರು ಯಾರು ಬೇಕಾದ್ರು ಕೆಲಸ ಮಾಡಬಹುದು .ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕಾರವಾರದಲ್ಲಿ ನಮ್ಮ ಕಚೇರಿಗೆ ಬೇಟಿ ನೀಡಿ ಅಂತ ಸ್ಥಳೀಯ ಯುವತಿಯೊಬ್ಬಳು ರೀಲ್ಸ್ ಮಾಡಿದ್ರೆ ,ಕೆಲವು ಪ್ರಮೋಷನ್ ಪೇಜ್ ನವರು ಹಣ ಪಡೆದು ಇನ್ ಸ್ಟಾ, ಫೇಸ್ ಬುಕ್ ನಲ್ಲಿ ಪ್ರಮೋಷನ್ ಮಾಡುತಿದ್ದಾರೆ.

Advertisement

ನಂಬಿ ಹೋಗುವ ಮುಂಚೆ ಎಚ್ಚರ!

ಹೀಗೆ ಪ್ರಮೋಷನ್ ಜಾಹಿರಾತುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಇದರ ಅಸಲಿಯತ್ ತಿಳಿಯಲು ಕನ್ನಡವಾಣಿ .ನ್ಯೂಸ್ ತಂಡ ಮಾಹಿತಿ ಕಲೆಹಾಕಿತು. ಉದ್ಯೋಗ (job) ಬಯಸುವವರು ಕಚೇರಿಗೆ ಭೇಟಿ ನೀಡಿದಾಗ ಮೊದಲು ನಿಮ್ಮ ವಿದ್ಯಾಭ್ಯಾಸದ ಅರ್ಹತೆ ಕೇಳಲಾಗುವುದಿಲ್ಲ. ಬದಲಿಗೆ ನೀವು ಕೆಲಸ ಮಾಡಲು ಇಚ್ಚಿಸಿದರೇ ,₹3500 ನ್ನು ಭದ್ರತಾ ಶುಲ್ಕ ಎಂದು ಕಟ್ಟಬೇಕು. ನಿಮಗೆ ಒಂದು software ಅನ್ನು ನೀಡಲಾಗುತ್ತದೆಯಂತೆ ಇದರಲ್ಲಿ ವರ್ಕ ಮಾಡಬೇಕು. ಒಂದು ಪ್ರಾಜಕ್ಟ್ ನಲ್ಲಿ 2500 ಪುಟಗಳ ಶೀಟ್ ಕೊಡುತ್ತಾರಂತೆ .ಇಲ್ಲಿ ಅಕ್ಷರ ನೋಡಿ ಕಾಪಿ ಫೇಸ್ಟ್ ಮಾಡಬೇಕಂತೆ ,ತಪ್ಪು ಮಾಡಿದ್ರೆ ನಿಮಗೆ ಕೊಡುವ ಹಣದಲ್ಲಿ ಕಟ್ ಮಾಡಿಕೊಳ್ಳಲಾಗುತ್ತದೆ. 2500 ಪೇಜ್ ನನ್ನು 40 ದಿನದ ಮಿತಿಯೊಳಗೆ ಮಾಡಬೇಕು. ಮಾಡದಿದ್ದರೇ ಅದಕ್ಕೂ ಹಣ ಕ್ಕೆ ಕತ್ತರಿ ಹಾಕಲಾಗುತ್ತದೆ. ಇನ್ನು ನೀವು ಕೆಲಸ ಬೇಡ ಎಂದು ಬಿಟ್ಟರೇ ₹3500  ಹಣ ಮರಳಿ ಕೊಡುವುದಿಲ್ಲ. ಒಂದುವೇಳೆ ನೀವು ಕೆಲಸ ಮಾಡಲು ಒಪ್ಪಿದ್ದೀರ ಎಂದು ತಿಳಿದುಕೊಂಡರೂ 2500 ಪುಟವನ್ನು 40 ದಿನದ ಒಳಗೆ ಪೂರೈಸಲು ಪ್ರತಿ ದಿನ 40 ಶೀಟ್ಸ್ ಗಳನ್ನ ಕನಿಷ್ಟ ಏಳರಿಂದ ಎಂಟು ತಾಸಿನೊಳಗೆ ಮಾಡಬೇಕಾಗುತ್ತದೆ.

ಇದನ್ನೂ ಓದಿ:-Karwar | ಹಳಿಯಾಳ PSIಗಳ ಆಡಿಯೋ ವೈರಲ್ ಪ್ರಕರಣ: ಮೂವರು ಪಿಎಸ್ಐ ಅಮಾನತು

ಇಲ್ಲಿ ಕೆಲಸ ಮಾಡುವುದರ ಬಗ್ಗೆ ಪ್ರಶ್ನೆ ಅಲ್ಲ. ಒಂದು ಸಂಸ್ಥೆ ಉದ್ಯೋಗ ಕೊಡುತ್ತದೆ ಅಂದರೆ ಅದಕ್ಕೆ ಅದರದ್ದೇ ಆದ ನಿಯಮಗಳು ಇರುತ್ತದೆ. ಕಾರ್ಮಿಕ ಇಲಾಖೆಯ ನಿಯಮ ಪಾಲನೆ ಮಾಡಬೇಕು. 15 ಸಾವಿರ ಸಂಬಳ ನೀಡಿದರೂ ಪಿ.ಎಫ್ ಸೇರಿದಂತೆ ಹಲವು ನಿಯಮಗಳು ಪಾಲನೆ ಮಾಡಬೇಕು. ಇಲ್ಲಿ ಅದ್ಯಾವುದೂ ಇಲ್ಲ. ಬದಲಿಗೆ ಕಂಪನಿಯೇ ಉದ್ಯೋಗಿಗಳಿಂದ ₹3500 ಹಣ ಕಟ್ಟಿಸಿಕೊಳ್ಳುವ ಜೊತೆಗೆ ತರಬೇತಿ ನೀಡದೇ ಬರುವ ಹಣವನ್ನೂ ಕಟ್ ಮಾಡುತ್ತದೆ ಎಂದರೆ ಈಬಗ್ಗೆ ಉದ್ಯೋಗ ಬಯಸುವವರು ಯೋಚಿಸಬೇಕು. ಎಚ್ಚರ ತಪ್ಪಿದರೇ ನಿಮ್ಮ ಹಣ ದೇವರ ಹುಂಡಿಗೆ ಹಾಕಿದೆ ಎಂದು ಸುಮ್ಮನಾಗಬೇಕಾಗುತ್ತದೆ.

₹3500 ಗೆ ಯಾವ ವ್ಯಕ್ತಿಯೂ ಠಾಣೆ ಮೆಟ್ಟಿಲೇರಿ ಕೋರ್ಟ ಕಚೇರಿ ತಿರುಗುವುದಿಲ್ಲ. ಅದಕ್ಕೆ ಬದಲಾಗಿ ಸ್ವಲ್ಪ ಹಣಹೋಯಿತಲ್ಲ ಎಂದು ಸುಮ್ಮನಾಗುವವರೇ ಹೆಚ್ಚು . ಈ ಕಂಪನಿ ಕನಿಷ್ಟ 50 ಜನರನ್ನ ತೆಗೆದುಕೊಂಡರೂ 175000 ಹಣ ಸಂಪಾದಿಸುತ್ತದೆ. ಜೊತೆಗೆ ಯಾವುದೋ ಕಂಪನಿಯ ಕೆಲಸ ಕೊಟ್ಟು ಅದರಿಂದಲೂ ಹಣ ದೋಚುತ್ತದೆ. ಅದೇ ಜಿಲ್ಲೆಯಾಧ್ಯಾಂತ 200 ಜನರನ್ನ ತೆಗೆದುಕೊಂಡರೇ ಏಳು ಲಕ್ಷ ಒಂದೇ ತಿಂಗಳಲ್ಲಿ ಜೇಬಿಗೆ ಇಳಿಸುತ್ತದೆ.

ಯೋಚಿಸಿ ನಿಮ್ಮ ಹಣ ವ್ಯರ್ಥ ಪೊಲಾಗದಂತೆ ನೋಡಿಕೊಳ್ಳಿ. ಯಾವ ಉತ್ತಮ ಕಂಪನಿಗಳೂ ಈರೀತಿ ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ.

ನಾವು ಠಾಣೆಯಲ್ಲಿ ಯಾವುದೇ ದೂರು ಇದುವರೆಗೂ ದಾಖಲಾಗದ ಕಾರಣ ಕಂಪನಿ ಹೆಸರನ್ನ ಹಾಕದೇ ಜನರ ಹಿತಕ್ಕಾಗಿ ಈ ಸುದ್ದಿಯನ್ನ ಮಾಡಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಹಲವರು ಬೆಂಗಳೂರಿನಂತಹ ಊರಿನಲ್ಲಿ ಹಣ ಕಳೆದುಕೊಂಡಿದ್ದಾರೆ.ಒಂದಲ್ಲಾ ಒಂದು ದಿನ ಇಂತಹ ಕಂಪನಿಗಳು ನೀವು ಕೆಲಸ ಮಾಡಿದ ಹಣ ನೀಡದೇ ,ನೀವು ಕಟ್ಟಿರುವ ಹಣವನ್ನೂ ವಂಚಿಸಿ ಕೊನೆಗೆ ಮಾಯವಾಗುತ್ತವೆ.ನಿಮ್ಮ ಶ್ರಮ ಹಾಗೂ ಹಣಕ್ಕೆ ಅದರದ್ದೇ ಆದ ಮಹತ್ವವಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು ಎಂದು ಕೊನೆಗೊಂದು ದಿನ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ ಎಚ್ಚರ.

ಈರೀತಿ ಕಂಪನಿಗಳ ಬಗ್ಗೆ ಕಾರ್ಮಿಕ ಇಲಾಖೆ ,ಪೊಲೀಸ್ ಇಲಾಖೆ ಒಂದು ಸುತ್ತು ತನಿಖೆ ಮಾಡಿದರೇ ಮುಂದಾಗಬಹುದಾದ ವಂಚನೆಗಳಿಂದ ಜನರನ್ನ ಬಚಾವ್ ಮಾಡಬಹುದಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement