Sirsi|ಕದಂಬೋತ್ಸವ ದಿನಾಂಕ ನಿಗಧಿ

135

ಕಾರವಾರ :- ರಾಜ್ಯದ ಪ್ರಸಿದ್ಧ ಐತಿಹಾಸಿಕ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ಕದಂಬೋತ್ಸವ ಆಯೋಜನೆ ಮಾಡಲಾಗುತಿದ್ದು ಈ ಬಾರಿ ಫೆ.24 ಮತ್ತು 25 ರಂದು ಆಯೋಜನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತ್ರತ್ವದಲ್ಲಿ ಸಭೆ ನಡೆಸಿ ಅಂತಿಮಗೊಳಿಸಲಾಯಿತು. ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ಕದಂಬೋತ್ಸವವು ಪ್ರಸಿದ್ಧ ಸಾಂಸ್ಕೃತಿಕ ಉತ್ಸವವಾಗಿದ್ದು, ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ. ಕದಂಬೋತ್ಸವವು ರಾಜ್ಯ ಸರ್ಕಾರದಿಂದ ಆಯೋಜಿಸಲ್ಪಟ್ಟ ಕಲೆ ಮತ್ತು ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಕಾರ್ಯಕ್ರಮವಾಗಿದ್ದು ದಕ್ಷಿಣ ಭಾರತದಾದ್ಯಂತದ ಕಲಾವಿದರು, ಮತ್ತು ಬರಹಗಾರರನ್ನು ಒಟ್ಟುಗೂಡಿಸುವಾಗ ಜಾನಪದ ನೃತ್ಯಗಾರರು, ನಾಟಕ ತಂಡಗಳು, ಶಾಸ್ತ್ರೀಯ ಸಂಗೀತಗಾರರು, ಕಲಾ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.ಈ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಸಹ ಪ್ರಧಾನ ಮಾಡಲಾಗುತ್ತದೆ.ಇದನ್ನೂ ಓದಿ:-ಅಪರೂಪದ ಬೃಹತ್‌ ಹಿಮಾಲಯನ್ ಗ್ರಿಫನ್‌ ಓಲ್ಚರ್‌ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ|ವಿಶೇಷ ಏನು ಗೊತ್ತಾ?

ಇಂದು ಶಿರಸಿಯ ಆಡಳಿತ ಸೌದದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪೂರ್ವಬಾವಿ ಸಭೆಯಲ್ಲಿ
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ , ಶಿರಸಿ ಶಾಸಕ ಭೀಮಣ್ಣ ನಾಯ್ಕ ಜಿಲ್ಲಾಧಿಕಾರಿ ಗಂಗೂಭಾಯಿ ಮಾನಕರ್ ಹಾಗು ಇತರ ಅಧಿಕಾರಿ ಭಾಗಿಯಾಗಿದ್ದರು.

ಇದನ್ನೂ ಓದಿ:-ಸಿದ್ದರಾಮಯ್ಯ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ- ಸಂಸದ ಅನಂತಕುಮಾರ್ ಹೆಗಡೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!