BREAKING NEWS
Search

ಅಯೋಧ್ಯೆ ರಾಮಮಂದಿರ ವಿಗ್ರಹಕೆತ್ತನೆ ಹಿಂದೆ ಕರಾವಳಿ, ಮಲೆನಾಡಿಗರು!

127

ಕಾರವಾರ :- ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ರೆ ಅಯೋದ್ಯೆ ರಾಮಮಂದಿರಕ್ಕೂ ಕರ್ನಾಟಕಕ್ಕೂ ಅದೇನೋ ಅವಿನಾಭಾವ ಸಂಬಂಧ. ಅಯೋಧ್ಯೆಯ ರಾಮ ಮಂದಿರ ತಳಭಾಗದಿಂದ ಹಿಡಿದು ಬಾಲ ರಾಮನ ಮೂರ್ತಿಯ ಕಲ್ಲು ಕರ್ನಾಟಕದ್ದಾದರೇ ಬಾಲ ರಾಮನನ್ನು ಕೆತ್ತಿದ ಶಿಲ್ಪಿಗಳು ಸಹ ಕರ್ನಾಟದವರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮನ ಪ್ರತಿಮೆ ಆಯ್ಕೆಯಾಗಿ ಪ್ರತಿಷ್ಟಾಪನೆ ಗೆ ಸಿದ್ದವಾಗಿದೆ. ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ಆದ್ರೆ ಇವರೊಂದಿಗೆ ಹೊನ್ನಾವರ ಇಡುಗುಂಜಿಯ ಗಣೇಶ್ ಎಲ್.ಭಟ್ ರವರು ಸಹ ಬಾಲ ರಾಮನ ವಿಗ್ರಹ ನಿರ್ಮಾಣ ಮಾಡಿದ್ದಾರೆ. ಇದರ ಜೊತೆ ಅಯೋಧ್ಯೆಯಲ್ಲಿ ಗರುಡ ವಿಗ್ರಹ ನಿರ್ಮಾಣ ಮಾಡಿದ್ದಾರೆ. ಇನ್ನು ಸಾಗರ ,ಹೊನ್ನಾವರದ ಕೆತ್ತನೆ ಕೆಲಸಗಾರರು ಸಹ ವಿಗ್ರಹ ಕೆತ್ತನೆಗೆ ಕೈ ಜೋಡಿಸಿದ್ದಾರೆ.

ದೇಶದಿಂದ ಆಯ್ಕೆಯಾಗಿದ್ದ ಮೂರು ಜನ ಶಿಲ್ಪಗಳಲ್ಲಿ ಹೊನ್ನಾವರ ತಾಲ್ಲೂಕಿನ ಇಡಗುಂಜಿಯ ಗಣೇಶ್ ಲಕ್ಷ್ಮೀನಾರಾಯಣ ಭಟ್ ಕೂಡ ಒಬ್ಬರು. ಇವರು ಇಡಗುಂಜಿ ಮಹಾಗಣಪತಿ ದೇವಸ್ಥಾನದ ಅರ್ಚಕ ಕುಟುಂಬದವರಾಗಿದ್ದಾರೆ.ಇದನ್ನೂ ಓದಿ:-wild animal attack:ಕುಮಟಾ ಹೊನ್ನಾವರ ಭಾಗದಲ್ಲಿ ಚಿರತೆ ಕಾಟ :ಹಸು ಬಲಿಪಡೆದ ಚಿರತೆ

ಇಡಗುಂಜಿ ಮಹಾಗಣಪತಿ ದೇವಸ್ಥಾನ ದೇಶದ ಅತ್ಯಂತ ಹಳೆಯ ದೇವಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಬಾಲರಾಮನ ವಿಗ್ರಹವನ್ನು ಕೆತ್ತುವ ಪ್ರಸ್ತಾಪವನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ರಾಮಮಂದಿರ ಟ್ರಸ್ಟ್‌ನಿಂದ ಕರೆ ಬಂದಾಗ ನಾನು ಇಡಗುಂಜಿಯಲ್ಲಿ ಮದುವೆಯಲ್ಲಿದ್ದೆ. ರಾಮನ ವಿಗ್ರಹವನ್ನು ಮಾಡಬಹುದೇ ಎಂದು ನನ್ನನ್ನು ಕೇಳಿದರು. ಇದೊಂದು ದೊಡ್ಡ ಆಶ್ಚರ್ಯವಾಗಿತ್ತು. ಇದು ಯಾವುದೇ ಶಿಲ್ಪಿಗೆ ಹೆಮ್ಮೆ ಮತ್ತು ಗೌರವ ಎಂದು ನಾನು ತಕ್ಷಣ ಒಪ್ಪಿಕೊಂಡೆ ಎಂದು ಅವರು ಹೇಳಿದರು.

ಅನಂತರ ಅವರು ತಮ್ಮ ಸಹಾಯಕರೊಂದಿಗೆ ಅಯೋಧ್ಯೆಗೆ ಹೋದರು, ಅಲ್ಲಿ ತಮ್ಮ ಕೆಲಸದ ಗೌಪ್ಯತೆ ಕಾಪಾಡಿಕೊಳ್ಳಲು ಹೇಳಿದರು. ಅವರನ್ನು ವಿಗ್ರಹದ ಕೆಲಸ ಮಾಡಲು ಕೇಳಿದಾಗ, ಅವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಹೊರವಲಯದ ಶ್ಯಾಮ ಶಿಲೆಯನ್ನು ಆಯ್ಕೆ ಮಾಡಿದರು. ಶ್ಯಾಮ ಶಿಲೆ ಒಂದು ನೈಸರ್ಗಿಕ ಕಲ್ಲು. ಇದು ಭೂಮಿಯೊಳಗೆ ಮೃದುವಾಗಿರುತ್ತದೆ ಮತ್ತು ಹೊರತೆಗೆದ ನಂತರ, ಗಟ್ಟಿಯಾಗುತ್ತದೆ, ಇದು ಕೆತ್ತನೆಗೆ ಸೂಕ್ತವಾಗಿದೆ. ಸಾಮಾನ್ಯವಾಗಿ ದೇವಾಲಯದ ವಿಗ್ರಹಗಳನ್ನು ಈ ಕಲ್ಲಿನಿಂದಲೇ ಮಾಡಲಾಗುತ್ತದೆ ಎಂದು ಭಟ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:-ಮುರ್ಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಪ್ಲೋಟಿಂಗ್ ಬ್ರಿಡ್ಜ್ ಲೋಕಾರ್ಪಣೆ.

ಬಾಲರಾಮನ ಅಜ್ಞಾತ ಚಿತ್ರವನ್ನು ರಚಿಸುವುದು ನಮ್ಮ ಸವಾಲಾಗಿತ್ತು. ನಾವು ವಿವಿಧ ಶಿಲ್ಪ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೇವೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಹುತೇಕ ಎಲ್ಲಾ ಪ್ರಕಾರದ ಕಲಾ ಪ್ರಕಾರಗಳನ್ನು ಅಳವಡಿಸಿಕೊಂಡಿದ್ದೇವೆ. ಕಮಲದ ಮೇಲೆ ಕುಳಿತಿರುವ ಈ ಏಕಶಿಲೆಯ ಪ್ರತಿಮೆಯು ಸುತ್ತಲೂ ಶಿವ, ಬ್ರಹ್ಮ, ಬಾಲ ಹನುಮಾನ್, ವಿಷ್ಣುವಿನ ಆಯುಧಗಳು ಮತ್ತು ಸೂರ್ಯನನ್ನು ಹೊಂದಿದೆ. ಈ ರೂಪದಲ್ಲಿ, ವಿಗ್ರಹವು ವಿಷ್ಣುವಿನ ಅವತಾರವಾದ ಭಗವಾನ್ ರಾಮನ ಬಗ್ಗೆ ಬೃಹತ್ ಮಾಹಿತಿಯನ್ನು ನೀಡುತ್ತದೆ. ಸೂರ್ಯನು ಅವನ ವಂಶವನ್ನು ಪ್ರತಿನಿಧಿಸುತ್ತಾನೆ ಎಂದು ತಾವು ನಿರ್ಮಿಸಿದ ಬಾಲರಾಮನಬಗ್ಗೆ ವಿವರಣೆ ನೀಡಿದರು.

ಅವರ ಎಂಟು ಜನರ ತಂಡವು 7.4 ಅಡಿ ವಿಗ್ರಹವನ್ನು ಕೆತ್ತಲು ಏಳು ತಿಂಗಳುಗಳು ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೆಲಸಿರುವ ಶಿಲ್ಪಿ ಬಿಪಿನ್ ಸಿಂಗ್ ಬದುರಿಯಾ, ಇಡಗುಂಜಿಯ ಶಿಲ್ಪಿ ಸಂದೀಪ್ ನಾಯಕ್ ,ಹೊನ್ನಾವರ ದ ಮನೋಹರ್ ಬಡಿಗೇರ್ , ಮೌನೇಶ್ ಆಚಾರ್ ,ಪ್ರಕಾಶ್ ಹನಮಣ್ಣನವರ್ ಸೇರಿದಂತೆ ಹಲವರು ಇವರ ತಂಡದ ಭಾಗವಾಗಿದ್ದಾರೆ. ಇದನ್ನೂ ಓದಿ:-Ayodhya Rama Mandir -ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ| ಶ್ರಮದ ಹಿಂದಿನ ಸ್ಟೋರಿ ಇಲ್ಲಿದೆ.

ಇವರ ತಂಡ ಅಯೋಧ್ಯ (Ayodhya temple)ದ್ವಾರದ ಗರುಡ ಮೂರ್ತಿ ಸೇರಿದಂತೆ ಹಲವು ಕಲಾಕೃತಿಯನ್ನು ಕೆತ್ತನೆ ಮಾಡಿದ್ದಾರೆ.

ಇವರು ಕೆತ್ತನೆ ಮಾಡಿದ ಶಿಲ್ಪಗಳು ಪೂರಾತನ ಕಾಲದ ಕಲಾ ಪ್ರಕಾರಗಳನ್ನು ಹೊಂದಿದೆ.

ಗಣಪತಿ ಭಟ್ ಅವರು 2,000 ಕ್ಕೂ ಹೆಚ್ಚು ಪ್ರತಿಮೆಗಳನ್ನು ಕೆತ್ತಿದ್ದಾರೆ, ಅವುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಅವರ ಕೃತಿಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಹೊಯ್ಸಳ, ಚೋಳ, ರಾಷ್ಟ್ರಕೂಟ, ಕದಂಬ ಮತ್ತು ಚಾಲುಕ್ಯರ ವಿವಿಧ ಶೈಲಿಗಳನ್ನು ಚಿತ್ರಿಸುವ 1000 ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ಭಾರತ, ಯುಕೆ, ಜರ್ಮನಿ, ಫ್ರಾನ್ಸ್, ಯುಎಸ್ಎ, ಇಟಲಿ ಮತ್ತು ಐರ್ಲೆಂಡ್‌ನಲ್ಲಿ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:-Astrology| ದಿನಭವಿಷ್ಯ 09-01-2024

50 ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳು ಮತ್ತು ತರಬೇತಿ/ಕಾರ್ಯಾಗಾರಗಳೊಂದಿಗೆ 120 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಭಾರತೀಯ ಶಿಲ್ಪ ಕಲಾದ ಅನನ್ಯ ಸಂಗ್ರಹಗಳನ್ನು ಪ್ರದರ್ಶಿಸಿದ್ದಾರೆ.

ಭಟ್ ಗೆ ಸಿಕ್ಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು.

ಕರ್ನಾಟಕ ರಾಜ್ಯ ಪ್ರಶಸ್ತಿ-1993,ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ – 2014,ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ – 2014,ಶಿಲ್ಪಶ್ರೀ ಪ್ರಶಸ್ತಿ – 1995,ಮೈಸೂರು ದಸರಾ ಪ್ರಶಸ್ತಿ – 1993, ನಾಡಪ್ರಭು ಕೆಂಪೇಗೌಡ ಪ್ರಶಸ್ತಿಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಬಾಜನರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!